ತೆಲಂಗಾಣ: ಠೇವಣಿ ಕಳೆದುಕೊಂಡ ನಟ ಪವನ್ ಕಲ್ಯಾಣ್ ರ ಜನ ಸೇನಾ ಪಕ್ಷದ ಅಭ್ಯರ್ಥಿಗಳು!
Update: 2023-12-03 15:51 GMT
ಹೈದರಾಬಾದ್: ತೆಲಂಗಾಣ ಚುನಾವಣೆಯಲ್ಲಿ ನಟ, ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷವು ತಾನು ಸ್ಪರ್ಧಿಸಿದ್ದ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ ಎಂದು telanganatoday.com ವರದಿ ಮಾಡಿದೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜನ ಸೇನಾ ಪಕ್ಷಕ್ಕೆ 8 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡಲಾಗಿತ್ತು. ಅದರಂತೆ ಜನ ಸೇನಾ ಪಕ್ಷವು ಖಮ್ಮಂ, ಕೊತ್ಗುಂಡೆಂ, ವೈರ, ಅಶ್ವಾರಾವ್ ಪೇಟ್, ಕುಕ್ಕಟ್ ಪಲ್ಲಿ, ತಂದೂರ್, ಕೊಡಾಡ್ ಹಾಗೂ ನಾಗ್ ಕರ್ನೂಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಕುಕ್ಕಟ್ ಪಲ್ಲಿ, ತಂದೂರ್ ಹಾಗೂ ಕೊತ್ಗುಂಡೆಂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಃ ಪವನ್ ಕಲ್ಯಾಣ್ ಅವರೇ ಪ್ರಚಾರ ನಡೆಸಿದರೂ, ಈ ಮೂರೂ ಕ್ಷೇತ್ರಗಳಲ್ಲಿ ಜನ ಸೇನಾ ಪಕ್ಷವು ಠೇವಣಿ ಕಳೆದುಕೊಂಡಿದೆ.