ವಾರಣಾಸಿ ಜ್ಞಾನವಾಪಿ ಮಸೀದಿ ಸರ್ವೆಗೆ ಜುಲೈ 26ರ ತನಕ ಸುಪ್ರೀಂ ತಡೆ

Update: 2023-07-24 06:55 GMT

ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಇಂದು ಬೆಳಗ್ಗೆ 7 ಗಂಟೆಗೆ ಆರಂಭಿಸಿರುವ ವೈಜ್ಞಾನಿಕ ಸಮೀಕ್ಷೆಯನ್ನು ಸುಪ್ರೀಂ ಕೋರ್ಟ್ ಇಂದು ಎರಡು ದಿನಗಳ ಕಾಲ ತಡೆಹಿಡಿದಿದೆ.

ಈ ಮಧ್ಯೆ, ಅಲಹಾಬಾದ್ ಹೈಕೋರ್ಟ್ ಗೆ ತೆರಳಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಲಾಗಿದೆ.

ಸಂಪೂರ್ಣ ಜ್ಞಾನವಾಪಿ ಮಸೀದಿ ಆವರಣ(ವುಝುಖಾನಾ ಹೊರತುಪಡಿಸಿ) ದ ಪುರಾತತ್ವ ಸರ್ವೇಕ್ಷಣಾ ಇಲಾಖೆ( ಎಎಸ್ ಐ) ಸಮೀಕ್ಷೆಯನ್ನು ಅನುಮತಿಸುವ ವಾರಣಾಸಿ ನ್ಯಾಯಾಲಯದ ಆದೇಶವನ್ನು ಜುಲೈ 26, 2023 ರಂದು ಸಂಜೆ 5 ಗಂಟೆಯ ನಂತರ ಮಾತ್ರ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ..

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಐತಿಹಾಸಿಕ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಯು ಉತ್ಖನನಕ್ಕೆ ಕಾರಣವಾಗಬಹುದು ಎಂಬ ಆತಂಕದೊಂದಿಗೆ ಮಸೀದಿಯ ಆಡಳಿತ ಸಮಿತಿಯು ಸುಪ್ರೀಂಕೋರ್ಟ್ ನ್ನು ಸಂಪರ್ಕಿಸಿತ್ತು.

ಆದಾಗ್ಯೂ, ಸಮೀಕ್ಷೆಯು ಕಟ್ಟಡದ ರಚನೆಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರವು ನ್ಯಾಯಾಲಯಕ್ಕೆ ಭರವಸೆ ನೀಡಿತು "ಒಂದು ಇಟ್ಟಿಗೆಯನ್ನು ತೆಗೆದಿಲ್ಲ ಅಥವಾ ಆ ನಿಟ್ಟಿನಲ್ಲಿ ಯೋಜಿಸಲಾಗಿಲ್ಲ" ಎಂದು ಒತ್ತಿಹೇಳಿತು.

ಸಮೀಕ್ಷೆಯ ಯೋಜನೆಯು ಮಾಪನ, ಛಾಯಾಗ್ರಹಣ ಹಾಗೂ ರಾಡಾರ್ ಅಧ್ಯಯನಗಳನ್ನು ಮಾತ್ರ ಒಳಗೊಂಡಿದೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News