ಜಮ್ಮು ಕಾಶ್ಮೀರ ನೂತನ ಸರ್ಕಾರದ ಮೊದಲ ಸಂಪುಟ ಸಭೆ: ರಾಜ್ಯ ಸ್ಥಾನಮಾನ ಬೇಡಿಕೆಯ ನಿರ್ಣಯ ಅಂಗೀಕಾರ

Update: 2024-10-18 06:53 GMT

Photo: ANI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಉಮರ್ ಅಬ್ದುಲ್ಲಾ ಸರಕಾರ ನಿರ್ಣಯವೊಂದನ್ನು ಅಂಗೀಕರಿಸಿದೆ.

ಈ ನಿರ್ಣಯದ ಕರಡನ್ನು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 42 ಸ್ಥಾನಗಳನ್ನು ಜಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಸಿದ್ಧಪಡಿಸಿದೆ.

ಇದಾದ ನಂತರ, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೊಸದಿಲ್ಲಿಗೆ ಪ್ರಯಾಣಿಸಿ, ನಿರ್ಣಯದ ಕರಡನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಆದರೆ, ರಾಜ್ಯ ಸ್ಥಾನಮಾನಕ್ಕಾಗಿನ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸುವ ಬದಲು, ಸಚಿವ ಸಂಪುಟದಲ್ಲಿ ಅಂಗೀಕರಿಸಿರುವ ಬಗ್ಗೆ ಪೀಪಲ್ಸ್ ಕಾನ್ಫರೆನ್ಸ್ ನ ಮುಖ್ಯಸ್ಥ ಸಜ್ಜದ್ ಲೋನೆ ಪ್ರಶ್ನಿಸಿದ್ದಾರೆ. ಅವರ, ಪ್ರಕಾರ, ಇಂತಹ ವಿಷಯಗಳಿಗೆ ವಿಧಾನಸಭೆಯೇ ಸೂಕ್ತ ಎಂದಾಗಿದೆ.

ಉಮರ್ ಅಬ್ದುಲ್ಲಾ ಅಂಗೀಕರಿಸಿರುವ ರಾಜ್ಯ ಸ್ಥಾನಮಾನಕ್ಕಾಗಿನ ನಿರ್ಣಯವನ್ನು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಶಾಸಕ ವಹೀದ್ ಪಾರಾ ಕೂಡಾ ಟೀಕಿಸಿದ್ದು, ಇದು ಆಗಸ್ಟ್ 5, 2019ರ ನಿರ್ಧಾರದ ಸರಿಪಡಿಸುವಿಕೆಯಾಗಿದ್ದು, 370ನೇ ವಿಧಿಯನ್ನು ಪ್ರಸ್ತಾಪಿಸುವಲ್ಲಿನ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಜಮ್ಮು ಮತ್ತು ಕಾಶ್ಮೀರಕ್ಕೆ ಕಾಲಮಿತಿಯಲ್ಲಿ ರಾಜ್ಯ ಸ್ಥಾನಮಾನವನ್ನು ಮರು ಸ್ಥಾಪಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಗುರುವಾರ ತುರ್ತು ವಿಚಾರಣೆಗಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News