ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಂ ಲ್ಯಾಂಡರ್: ಹೊಸ ಇತಿಹಾಸ ನಿರ್ಮಾಣವಾಗಿದೆ ಎಂದ ಪ್ರಧಾನಿ ಮೋದಿ

Update: 2023-08-23 14:15 GMT

ಜೊಹಾನ್ಸ್ ಬರ್ಗ್ (ದಕ್ಷಿಣ ಆಫ್ರಿಕಾ): ಭಾರತವು ಸಾಮೂಹಿಕ ಪರಿಶ‍್ರಮದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಪ್ರಥಮ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಸಾಧನೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, “ಈ ಕ್ಷಣವು ಅತ್ಯಮೂಲ್ಯ ಹಾಗೂ ಅಭೂತಪೂರ್ವವಾಗಿದೆ. ಈ ಕ್ಷಣವು ಭಾರತದ ಜಯಘೋಷವಾಗಿದೆ. ಈ ಕ್ಷಣವು 140 ಕೋಟಿ ಜನರ ಹೃದಯ ಮಿಡಿತದ ಶಕ್ತಿಯಾಗಿದೆ. ಅಮೃತ ಕಾಲದ ಹಂತದಲ್ಲಿ ಅಮೃತ ವರ್ಷದ ಯಶಸ್ಸಾಗಿದೆ. ಹೊಸ ಇತಿಹಾಸ ನಿರ್ಮಾಣವಾಗಿದೆ” ಎಂದು ದಕ್ಷಿಣ ಆಫ್ರಿಕಾದಿಂದ ಆನ್ ಲೈನ್ ನೇರಪ್ರಸಾರದ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿಂದಲೇ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ಈ ಹಿಂದೆ ಚಂದ್ರನ ಮೇಲೆ ನಿಯಂತ್ರಿತವಾಗಿ ಗಗನ ನೌಕೆಯನ್ನು ಇಳಿಸಿದ್ದ ರಷ್ಯಾ, ಅಮೆರಿಕಾ ಹಾಗೂ ಚೀನಾದ ಸಾಲಿಗೆ ಇದೀಗ ಭಾರತವು ಸೇರ್ಪಡೆಯಾಗಿದೆ.

ಚಂದ್ರನ ಮೇಲಿನ ಈ ಯಶಸ್ವಿ ಗಗನ ನೌಕೆ ಇಳಿಕೆಯು ರಷ್ಯಾದ ಗಗನ ನೌಕೆಯು ಇದೇ ಪ್ರಾಂತ್ಯದಲ್ಲಿ ಪತನಗೊಂಡ ಕೆಲವೇ ದಿನಗಳಲ್ಲಿ ನಡೆದಿದ್ದು, 2019ರಲ್ಲಿ ಸ್ವತಃ ಭಾರತ ಕೂಡಾ ಈ ಪ್ರಯತ್ನದಲ್ಲಿ ವಿಫಲಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News