ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿ ಪ್ರತಿಮೆ ನಿರ್ಮಿಸಲಾಗಿತ್ತೇ?; ಸತ್ಯಾಂಶ ಇಲ್ಲಿದೆ
ಹೊಸದಿಲ್ಲಿ: ನೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ ವಿರಾಟ್ ಕೊಹ್ಲಿಯವರ ನೈಜ ಗಾತ್ರದ ಪ್ರತಿಮೆಯ ಚಿತ್ರಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಅಲ್ಲದೇ ನ್ಯೂಸ್18, ಲೈವ್‍ಮಿಂಟ್, ದ ಇಂಡಿಯನ್ ಎಕ್ಸ್‍ಪ್ರೆಸ್, ದ ಹಿಂದೂಸ್ತಾನ್ ಟೈಮ್ಸ್ ಮತ್ತು ಮನಿ ಕಂಟ್ರೋಲ್‍ನಂಥ ಹಲವು ಮಾಧ್ಯಮಗಳು, ಇತ್ತೀಚೆಗೆ ಕೊಹ್ಲಿಯವರ ವೈಭವೋಪೇತ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ವರದಿ ಮಾಡಿದವು. ಸುದ್ದಿಸಂಸ್ಥೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡಾ ಪೋಸ್ಟ್ ಮಾಡಿದ್ದರು.
(Source: Indian Express)
(Source: YouTube/Altered by The Quint)
(Source: X/Altered by The Quint)
(Source: Instagram/Altered by The Quint)
ಆದರೆ ಈ ಪುತ್ಥಳಿ ನೈಜವಲ್ಲ ಎನ್ನುವುದು ಕೆಲ ಜಾಲತಾಣ ಪೋಸ್ಟ್ ಗಳಿಂದ ಸ್ಪಷ್ಟವಾಗುತ್ತದೆ. ಇದು ಡ್ಯೂರೊಫ್ಲೆಕ್ಸ್ ಹಾಸಿಗೆ ಕಂಪನಿಯ ಜಾಹೀರಾತು ಆಗಿದ್ದು, ಕಂಪ್ಯೂಟರ್ ಸೃಷ್ಟಿಮಾಡಿದ ಕಾಲ್ಪನಿಕ ಆಕೃತಿ (ಸಿಜಿಐ) ಬಳಸಿಕೊಂಡು ಕೊಹ್ಲಿಯವರ ಈ ಚಿತ್ರ ನಿರ್ಮಿಸಲಾಗಿದೆ ಎನ್ನುವುದನ್ನು ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಕಂಪನಿ ವಿವರಿಸಿದೆ.
ಗೂಗಲ್ ರಿವರ್ಸ್ ಇಮೇಜ್ ಸರ್ಚ್‍ನಿಂದ ಕೂಡಾ ಇದು ದೃಢಪಟ್ಟಿದೆ. ಈ ಪೋಸ್ಟ್‍ಗಳನ್ನು ಪರಿಶೀಲಿಸಿದಾಗ ಕಂಪನಿ ಸಿಜಿಐ ಹ್ಯಾಷ್‍ಟ್ಯಾಗ್ ಹಾಕಿರುವುದು ಅಥವಾ ತಮ್ಮ ಶೀರ್ಷಿಕೆಯಲ್ಲಿ ಇದನ್ನು ಉಲ್ಲೇಖಿಸಿರುವುದು ದೃಢಪಟ್ಟಿತು. ಸಿಜಿಐ ಅಂದರೆ ಇಲ್ಲಿ ಬಳಸಿರುವ ಚಿತ್ರಗಳು ನೈಜವಲ್ಲ ಎಂಬ ಅರ್ಥ. ಅರ್ಥ್‍ಕ್ಯಾಮ್‍ನ ಯೂಟ್ಯೂಬ್ ಚಾನಲ್‍ನಲ್ಲಿ ಟೈಮ್ಸ್ ಸ್ಕ್ವೇರ್ ಲೈವ್ ಫೀಡ್ ಪರಿಶೀಲಿಸಿದಾಗ ಕೂಡಾ ಕೊಹ್ಲಿ ಪುತ್ಥಳಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಕಂಡುಬಂದಿದೆ.
ಕೃಪೆ: thequint.com