ಲಿಂಗ ಪರಿವರ್ತಿಸಿಕೊಂಡ ಮಹಿಳಾ ಐ ಆರ್ ಎಸ್ ಅಧಿಕಾರಿ

Update: 2024-07-10 15:36 GMT

ಎಂ.ಅನುಕಾಂತಿರ್ ಸೂರ್ಯ PC: x.com/umasudhir

ಹೊಸದಿಲ್ಲಿ: ಹೈದರಾಬಾದ್ ನ ಕೇಂದ್ರೀಯ ಎಕ್ಸೈಸ್ ಕಸ್ಟಮ್ಸ್ ಎಕ್ಸೈಸ್ ಮತ್ತು ಸೇವಾ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಪ್ರಾದೇಶಿಕ ಪೀಠದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಐಆರ್ಎಸ್ ಅಧಿಕಾರಿಯೊಬ್ಬರು ಲಿಂಗ ಪರಿವರ್ತನೆ ಮಾಡಿಸಿಕೊಂಡು, ಭಾರತದ ನಾಗರಿಕ ಸೇವೆಗಳ ಇತಿಹಾಸದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ.

ಮಂಗಳವಾರದಿಂದ ಸರ್ಕಾರ ತನ್ನ ದಾಖಲೆಗಳಲ್ಲಿ ಈ ಸಂಬಂಧ ತಿದ್ದುಪಡಿಗಳನ್ನು ಮಾಡಿಕೊಂಡಿದ್ದು, ಅವರು ಪುರುಷ ನಾಗರಿಕ ಸೇವಾ ಅಧಿಕಾರಿಯಾಗಿದ್ದಾರೆ.

"2013ನೇ ಬ್ಯಾಚ್ ನ ಐಆರ್ಎಸ್ ಅಧಿಕಾರಿಯಾಗಿರುವ ಎಂ.ಅನುಸೂಯ ಪ್ರಸ್ತುತ ಹೈದರಾಬಾದ್ ನ ಸಿಇಎಸ್ ಟಿಎಟಿಯಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಪುರುಷರಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಬಳಿಕ ತಮ್ಮ ಹೆಸರನ್ನು ಕುಮಾರಿ ಎಂ.ಅನಸೂಯಾ ಬದಲಾಗಿ ಶ್ರೀ ಎಂ.ಅನುಕಾಂತಿರ್ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ" ಎಂದು ಕೇಂದ್ರ ಹಣಕಾಸು ಸಚಿವಾಲಯದ ಆದೇಶದಲ್ಲಿ ಹೇಳಲಾಗಿದೆ.

ಅನಸೂಯ ಅವರ ಮನವಿಯನ್ನು ಪುರಸ್ಕರಿಸಲಾಗಿದ್ದು, ಇನ್ನು ಮುಂದೆ ಎಲ್ಲ ದಾಖಲೆಗಳಲ್ಲಿ ಅವರ ಹೆಸರನ್ನು  ಎಂ.ಅನುಕಾಂತಿರ್ ಸೂರ್ಯ ಎಂದು ಬದಲಿಸಲಾಗುತ್ತಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಆದೇಶದಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News