ವಿದ್ಯಾರ್ಥಿಗಳಿಗೆ ನಕಲಿ ಪತ್ರಗಳನ್ನು ನೀಡಿದ ವಲಸೆ ಏಜಂಟ್ ಕೆನಡದಲ್ಲಿ ಬಂಧನ

Update: 2023-06-24 18:14 GMT

Photo: PTI 

ಒಟ್ಟಾವ (ಕೆನಡ), ಜೂ. 24: ವಿದ್ಯಾರ್ಥಿಗಳಿಗೆ ಕೆನಡದ ಕಾಲೇಜುಗಳ ನಕಲಿ ಪ್ರವೇಶ ಪತ್ರಗಳನ್ನು ನೀಡಿ ವಂಚಿಸಿದ ಭಾರತೀಯ ವಲಸೆ ಏಜಂಟ್ನನ್ನು ಕೆನಡ ಬೋರ್ಡರ್ ಸರ್ವಿಸ್ ಏಜನ್ಸಿ ಶುಕ್ರವಾರ ಬಂಧಿಸಿದೆ ಎಂದು ‘ಟೊರಾಂಟೊ ಸ್ಟಾರ್’ ವರದಿ ಮಾಡಿದೆ.

ಬಂಧಿತ ಬೃಜೇಶ್ ಮಿಶ್ರಾ ಪಂಜಾಬ್ನ ಜಲಂಧರ್ನಲ್ಲಿ ಎಜುಕೇಶನ್ ಮೈಗ್ರೇಶನ್ ಸರ್ವಿಸಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದನು. ಈ ಸಂಸ್ಥೆಯು, ಕೆನಡದಲ್ಲಿ ಅಧ್ಯಯನ ಪರ್ಮಿಟ್ಗಳನ್ನು ಪಡೆಯುವುದಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ನಕಲಿ ಆಫರ್ ಲೆಟರ್ಗಳನ್ನು ನೀಡಿತ್ತು. ಈ ನಕಲಿ ದಾಖಲೆಗಳನ್ನು ಬಳಸಿರುವುದಕ್ಕಾಗಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಕೆನಡದಲ್ಲಿ ಗಡಿಪಾರು ಎದುರಿಸುತ್ತಿದ್ದಾರೆ.

ಮಿಶ್ರಾ ಕೆನಡ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಕೆನಡದ ಗಡಿ ರಕ್ಷಣಾ ಪಡೆ ಬಂಧಿಸಿತು. ತಪಾಸಣೆಯ ವೇಳೆ, ಆತನಿಗೆ ಕೆನಡ ಪ್ರವೇಶವನ್ನು ನಿಷೇಧಿಸಿರುವುದು ಪತ್ತೆಯಾಯಿತು. ಭಾರತೀಯ ವಿದ್ಯಾರ್ಥಿಗಳಿಗೆ ಕೆನಡದ ಕಾಲೇಜುಗಳು ನೀಡಿವೆ ಎನ್ನಲಾದ ಸ್ವೀಕೃತಿ ಪತ್ರಗಳನ್ನು ಸ್ವತಃ ಆತನೇ ಅಕ್ರಮವಾಗಿ ತಯಾರಿಸಿದ್ದನು. ವಂಚನೆ ಆರೋಪವನ್ನು ಅವನ ವಿರುದ್ಧ ಹೊರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News