ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ನಿರಾಕರಿಸಿದ ಕೇಂದ್ರ ಸರ್ಕಾರ: ಜಾರಿ ಖಚಿತ ಎಂದ ಸಚಿವ ಕೆ.ಎಚ್ ಮುನಿಯಪ್ಪ

Update: 2023-06-23 12:33 GMT

ಹೊಸದಿಲ್ಲಿ, ಜೂನ್.23: ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಒದಗಿಸಲು 1.35 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ನೀಡಲು ನಾವು ವಿನಂತಿಸಿದ್ದೇವೆ ಆದರೆ ಕೇಂದ್ರ ಆಹಾರ ಸಚಿವರು ಅಕ್ಕಿಯನ್ನು ನೀಡಲು ನಿರಾಕರಿಸಿರುತ್ತಾರೆ ಎಂದು ರಾಜ್ಯ ಆಹಾರ ಸಚಿವರಾದ ಕೆ ಎಚ್ ಮುನಿಯಪ್ಪ ರವರು ದೆಹಲಿಯಲ್ಲಿ ಇಂದು ತಿಳಿಸಿದ್ದಾರೆ. 

ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಇಂದು ಕೇಂದ್ರ ಜವಳಿಯ ಸಕ್ಕರೆ ಮತ್ತು ಕೃಷಿ ಸಚಿವರಾದ ಪಿಯೂಷ್ ಗೋಯಲ್ ರವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಅನ್ಯ ಭಾಗ್ಯ ಯೋಜನೆಗೆ ಅಕ್ಕಿಯನ್ನು ನೀಡಲು ಮನವಿ ಮಾಡಿದೆವು. ಆದರೆ ಕೇಂದ್ರ ಸಚಿವರು 300 lakh ton ಇತರೆ ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದೆ ಆದ್ದರಿಂದ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿರುತ್ತಾರೆ.

ಆದರೆ ರಾಜ್ಯ ಸರ್ಕಾರವು ಅನ್ನಭಾಗ್ಯದ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತದೆ ಎಂದು ಕೆ ಎಚ್ ಮುನಿಯಪ್ಪ ರವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News