ರಂಗಾಯಣ ಹೀಗೇಕೆ?
ಮಾನ್ಯರೇ,
ರಾಜ್ಯದಲ್ಲಿ ಈಗಿನ ಸರಕಾರ ಅಸ್ತಿತ್ವಕ್ಕೆ ಬಂದು ಸುಮಾರು ಒಂದೂವರೆ ವರ್ಷವಾಗುತ್ತಾ ಬಂದರೂ, ರಾಜ್ಯ ಸರಕಾರದ ಅಧೀನದಲ್ಲಿರುವ, ಆರು ರಂಗಾಯಣಗಳಾದ ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರರ್ಗಿ ದಾವಣಗೆರೆ ಮತ್ತು ಕಾರ್ಕಳ ಈ ಆರಕ್ಕೂ ಇದುವರೆಗೂ ಹೊಸ ನಿರ್ದೇಶಕರುಗಳನ್ನು ನೇಮಕ ಮಾಡದಿರುವುದರಿಂದ ರಂಗಾಯಣದ ಚಟುವಟಿಕೆಗಳೇ ಒಂದು ರೀತಿಯಲ್ಲಿ ಸ್ಥಗಿತ ಗೊಂಡಿವೆ.
ಇದ್ದುದರಲ್ಲಿ, ಮೈಸೂರು ರಂಗಾಯಣದಲ್ಲಿ ಚಟುವಟಿಕೆಗಳು ನಡೆಯುತ್ತಿದ್ದವು, ಆದರೆ ಇಲ್ಲಿಯ ರಂಗಾಯಣದ ಉಪನಿರ್ದೇಶಕಿಯನ್ನು ಕಳೆದ ತಿಂಗಳು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದರಿಂದ, ಈಗ ಮೈಸೂರಿನ ರಂಗ ಚಟುವಟಿಕೆಗಳು, ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಸರಕಾರವು ಕೂಡಲೇ ರಂಗಾಯಣದಲ್ಲಿ ಕೆಲಸ ಮಾಡಿದ ಹಿರಿಯ ಕಲಾವಿದರನ್ನು ಗುರುತಿಸಿ ಮತ್ತು ರಂಗಾಯಣದ ಬಗ್ಗೆ ಬದ್ಧತೆ ಇರುವವರನ್ನು ಹೊಸ ನಿರ್ದೇಶಕರನ್ನಾಗಿ ನೇಮಕ ಮಾಡಿ, ರಂಗ ಚಟುವಟಿಕೆಗಳು ಆರಂಭವಾಗುವಂತೆ ಮಾಡುವ ಜವಾಬ್ದಾರಿ ತೋರಬೇಕಾಗಿದೆ.
-ಬೂಕನಕೆರೆ ವಿಜೇಂದ್ರ,
ಕುವೆಂಪು ನಗರ, ಮೈಸೂರು