ರಾಯಚೂರು| ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಹೋರಾಟ: ಸಿಪಿಐ (ಎಂ) ಮುಖಂಡ ಬಸವಂತರಾಯ ಗೌಡ
ರಾಯಚೂರು| ಜಿಲ್ಲೆಯ ಸಿಂಧನೂರು ಪಟ್ಟಣದ ಪುಟ‌್ ಪಾತ್ ರಸ್ತೆ ಅಗಲೀಕರಣ ಮಾಡಿದ್ದು ಸ್ವಾಗತಾರ್ಹ. ಆದರೆ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಿಪಿಐ (ಎಂ)ಮುಖಂಡರಾದ ಬಸವಂತರಾಯ ಗೌಡ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಬದಿ ಪಾದಚಾರಿ ಜಾಗ ಅತಿಕ್ರಮಣ ಮಾಡಿಕೊಂಡಿದ್ದನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ಮಾಡಿದಾಗ ಅಧಿಕಾರಿಗಳು ತೆರವುಗೊಳಿಸದೆ ತಡಮಾಡಿ ಈಗ ತೆರವು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಸ್ತೆ ಬದಿ ಜಾಗ ಅತಿಕ್ರಮಣ ತೆರವು ಕಾರ್ಯ ನಡೆಸುವ ಮೂಲಕ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲಿಸಿದ್ದು ಸರಿ. ಆದರೆ ತೆರವು ಕಾರ್ಯ ದಿಂದ ಒಂದು ಸಾವಿರ ಮೇಲ್ಪಟ್ಟ ಸಣ್ಣಪುಟ್ಟ ಬೀದಿಬದಿಯ ವ್ಯಾಪಾರಿಗಳು ಇಂದು ಬೀದಿಗೆ ಬಿದ್ದಿವೆ ನಗರಸಭೆ ಸರ್ವೆ ಮಾಡಿ ಅಂದಾಜು 900 ಜನರಿಗೆ ಬೀದಿಬದಿ ವ್ಯಾಪಾರಿಗಳೆಂದು ನಗರಸಭೆ ವತಿಯಿಂದ ಗುರುತಿನ ಚೀಟಿ ನೀಡಲಾಗಿದೆ ಎಂದರು.
ನಗರಸಭೆಯ ವತಿಯಿಂದ 900 ಜನರಿಗೆ ಗುರುತಿನ ಚೀಟಿ ನೀಡಿ ಅವರಿಂದ ಟ್ಯಾಕ್ಸ್ ತೆಗೆದುಕೊಂಡ ನಗರಸಭೆ ಅವರಿಗೆ ಯಾಕೆ ಇಲ್ಲಿಯ ತನಕ ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಿದ ಕಾರಣ ಇಂದು ಬೀದಿಬದಿಯ ವ್ಯಾಪಾರಿಗಳು ಬೀದಿಗೆ ಬೀಳಲು ನಗರಸಭೆ ನೇರ ಹೊಣೆ ಎಂದು ಆರೋಪಿಸಿದರು.
ಬೀದಿಬದಿಯ ವ್ಯಾಪಾರ ಮಾಡುವ ವ್ಯಾಪಾರಿಗಳು ಬ್ಯಾಂಕು ಹಾಗೂ ಪೈನ್ಸ್ ನಲ್ಲಿ ಸಾಲ ತಂದು ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುವ ಕುಟುಂಬಗಳು ಈಗ ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತ ದಿಂದ ಬೀದಿಗೆ ಬಿದ್ದಿವೆ ಅವರಿಗೆ ಸಾಲ ವಸೂಲು ಮಾಡದಂತೆ ಜಿಲ್ಲಾಡಳಿತ ತಾಲೂಕು ಆಡಳಿತ ಸೂಚನೆ ನೀಡಬೇಕು ಎಂದು ಅಗ್ರಹಿಸಿದರು.
15 ದಿನಗಳಲ್ಲಿ ಬೀದಿಬದಿಯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ತಹಸೀಲ್ದಾರ ಕಚೇರಿಯ ಮುಂದೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಅವರು ಮುನ್ಸೂಚನೆ ನೀಡಿದರು.
ಪಿಡಬ್ಲ್ಯೂಡಿ ಕ್ಯಾಂಪ ನಲ್ಲಿರುವ ನೀರಾವರಿ ಇಲಾಖೆಯ ಜಾಗದಲ್ಲಿದ್ದ ಸುಮಾರು ಬಡ ಕುಟುಂಬಗಳ ವಾಸ ಮಾಡುತ್ತಿದ್ದು ಅವರಿಗೆ ಜಾಗ ಖಾಲಿ ಮಾಡುವಂತೆ ಇಲಾಖೆಯ ವತಿಯಿಂದ ನೋಟೀಸ್ ನೀಡಿ ಕೈ ತೊಳೆದು ಕೊಂಡ ಅಧಿಕಾರಿಗಳು ನಂತರ ಪುರಸಭೆ ಮಾಜಿ ಅಧ್ಯಕ್ಷ ರಾದ ಲೈಕ್ ಸಾಬ ಕಟ್ಟಡ ಕಟ್ಟಿ ಬಾಡಿಗೆ ತೆಗೆದುಕೊಂಡು ಬಂದ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಯಾಕೆ ಇಲ್ಲಿಯವರೆಗೆ ಸುಮ್ನೆ ಇದ್ದರು ಎಂದು ಮುಖಂಡರಾದ ಶೇಕ್ಷಾಖಾದ್ರಿ ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಈಗ ತೆರವುಗೊಳಿಸಿದ್ದಕ್ಕೆ ನಾವು ವಿರೋಧ ಮಾಡದೆ ಸ್ವಾಗತಿಸುತ್ತೇವೆ. ತೆರವುವಿನಿಂದ ಹಲವಾರು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ ನಿವೇಶನ ರಹಿತ ಈ ಕುಟುಂಬಗಳಿಗೆ ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನ ನೀಡಬೇಕು ಎಂದು ತಾಲೂಕು ಆಡಳಿತವನ್ನು ಒತ್ತಾಯ ಮಾಡಿದರು.
ಸಿಪಿಐ ಎಂ ಪಕ್ಷದ ಮುಖಂಡರಾದ ರೇಣುಕಮ್ಮ,ಶರಣಮ್ಮ ಪೋಲೀಸ ಪಾಟೀಲ ಇದ್ದರು.