ರಾಯಚೂರು | ಬಾಣಂತಿ, ನವಜಾತ ಶಿಶು ಮೃತ್ಯು : ವೈದ್ಯರ ನಿರ್ಲಕ್ಷ್ಯ ಆರೋಪ
ರಾಯಚೂರು : ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಬಾಣಂತಿ ಹಾಗೂ ನವಜಾತ ಶಿಶು ಬುಧವಾರ ಬೆಳಗಿನ ಜಾವ ಸಾವನ್ನಪ್ಪಿದ ಘಟನೆ ನಡೆದಿದೆ.
ದೇವದುರ್ಗ ತಾಲ್ಲೂಕಿನ ಮಸೀದಾಪುರ ಗ್ರಾಮದ ಶಿವಲಿಂಗಮ್ಮ(21) ಮೃತ ಬಾಣಂತಿ ಎಂದು ತಿಳಿದುಬಂದಿದೆ.
ಡಿ.27ರಂದು ಸಿಸೆರಿನ್ ಮೂಲಕ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಹೆರಿಗೆ ಬಳಿಕ ಬಿಪಿ ಹೆಚ್ಚಾಗಿದ್ದರಿಂದ ನಾಲ್ಕು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಮಗು ಮೃತಪಟ್ಟಿದ್ದು, 5 ಗಂಟೆಗೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ಸಂಬಂದಿಕರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಶಿವಲಿಂಗಮ್ಮ ಸಾವನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಕಳೆದ ವರ್ಷ ಬಾಣಂತಿಯರ ಸಾವಿನಿಂದ ಇಡೀ ರಾಜ್ಯ ಬೆಚ್ಚಿ ಬಿದ್ದಿತ್ತು. ಜಿಲ್ಲೆಯಲ್ಲಿ 11 ಬಾಣಂತಿಯರು ಸಾವನ್ನಪ್ಪಿದ್ದರು. ಹೊಸ ವರ್ಷದ ದಿನದಂದೇ ರಾಯಚೂರಿನಲ್ಲಿ ಬಾಣಂತಿ ಸಾವನಪ್ಪಿದ್ದು ಮತ್ತಷ್ಟು ಆತಂಕ ಮೂಡಿಸಿದೆ.
ಘಟನೆಯ ಬಗ್ಗೆ ರಿಮ್ಸ್ ಆಸ್ಪತ್ರೆಯ ಡೀನ್ ಡಾ.ರಮೇಶ ಬಿ.ಹೆಚ್. ಅವರಿಗೆ ಸಂಪರ್ಕಿಸಿದರು ಸ್ಪಂದನೆ ಇಲ್ಲ.