ರಾಯಚೂರು | ಬಡೇಸಾಬ್ ಉರೂಸ್ ಅಂಗವಾಗಿ ರಕ್ತದಾನ ಶಿಬಿರ
ರಾಯಚೂರು : ತಾಲ್ಲೂಕಿನ ಹಜರತ್ ಬಡೇಸಾಬ್ ಉರೂಸ್ ಅಂಗವಾಗಿ ಕಮಿಟಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಯಚೂರು ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಯಿತು.
126 ನೇ ವಷ೯ದ ಉರೂಸ್ ಎ ಷರೀಫ್ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ದರ್ಗಾ ಕಮಿಟಿಯ ಕಾರ್ಯದರ್ಶಿ ಮಹಮ್ಮದ್ ನಿಜಾಮದ್ದೀನ್ ಮಾತನಾಡಿ, ದರ್ಗಾದ ಕಮಿಟಿಯಿಂದ ಶೈಕ್ಷಣಿಕ ಹಾಗೂ ಆರೋಗ್ಯದ ಶಿಬಿರಗಳನ್ನು ಹಮ್ಮಿಕೊಂಡು ಜನರಿಗೆ ಸಹಕಾರ ಮಾಡುವಂತಹ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಶಿಬಿರದ ಉದ್ಘಾಟನೆಯನ್ನು ಯರಗೇರದ ಹಿರಿಯ ವೈದ್ಯ ಡಾ.ಲಕ್ಷ್ಮೀಕಾಂತ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ದರ್ಗಾದ ಸಜ್ಜಾದ್ ಎ ನಶೀನ್ ಸಯ್ಯದ್ ಹಫೀಜುಲ್ಲ ಖಾದ್ರಿ, ದರ್ಗಾ ಕಮಿಟಿಯ ಅಧ್ಯಕ್ಷ ಮೆಹಬೂಬ್ ಪಟೇಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ರೆಡ್ಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮೇಶ್ ನಾಯಕ, ಉಪಾಧ್ಯಕ್ಷ ಫಾರೂಕ್ ಹುಸೇನ್, ಜನಾರ್ದನ್ ರೆಡ್ಡಿ, ವಿಶ್ವನಾಥ್ ರೆಡ್ಡಿ ಭಾಗವಹಿಸಿದ್ದರು.