ರಾಯಚೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ವಿಳಂಬ; ಮೂವರು ಪಿಎಸ್ಐಗಳಿಗೆ ದಂಡ

Update: 2025-01-01 05:58 GMT

ರಾಯಚೂರು: ಸಿರವಾರ ತಾಲೂಕಿನ ಸಿಸಿ ಕ್ಯಾಮರಾ ದೃಶ್ಯಾವಳಿ ಮಾಹಿತಿ ಕೋರಿದ್ದನ್ನು ವಿಳಂಬ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 'ಮಾಹಿತಿ ಹಕ್ಕು' ಕಾಯ್ದೆಯ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಮೂವರು ಪಿಎಸ್ಐಗಳಿಗೆ ಮಾಹಿತಿ ಹಕ್ಕು ಆಯೋಗದ ಕಲುಬುರ್ಗಿ ಪೀಠವು ರೂ.75 ಸಾವಿರ ದಂಡ ವಿಧಿಸಿದೆ.

ಸಿರವಾರ ಪೊಲೀಸ್ ಠಾಣೆಯಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಪವನ್ ಕುಮಾರ್ ಕೋರಿಪಳ್ಳಿ 2022 ಜೂನ್ 4 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಿರವಾರ ಸಿಸಿ ಟಿವಿ ದೃಶ್ಯಾವಳಿಗಳನ್ನು‌ ಒದಗಿಸುವಂತೆ ಕೋರಿದ್ದರು.

ಸಿರವಾರದಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಳ್ಳಾರಿ ಗ್ರಾಮೀಣ ಪಿಎಸ್ಐ ಗೀತಾಂಜಲಿ ಸಿಂಧೆ, ಇಡಪನೂರು ಪಿಎಸ್ಐ ಅವಿನಾಶ ಕಾಂಬ್ಳೆ ಅವರು ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಕ್ಕಾಗಿ 2024 ಸೆ.5 ರಂದು 50 ಸಾವಿರ ದಂಡ ವಿಧಿಸಿ ಆದೇಶಿಲಾಗಿತ್ತು.

ಆದರೆ ಹಿಂದಿನ ಆದೇಶವನ್ನು ಪಾಲನೆ ಮಾಡದ ಕಾರಣ ಈ ಬಾರಿ ಪಿಎಸ್ಐ ಗುರುಚಂದ್ರಯಾದವ್ ಅವರಿಗೆ ರೂ 25 ಸಾವಿರ ದಂಡವನ್ನು ಹೆಚ್ಚಿಸಿ ರೂ.75 ಸಾವಿರ ದಂಡ ವಿಧಿಸಲಾಗಿದೆ. ಆದೇಶ ಕೋರಿದ ಸಿಸಿ ಟಿವಿ ದೃಷ್ಯವಳಿವಳನ್ನು 15 ದಿನಗಳಲ್ಲಿ ಮೇಲ್ಮನವಿ ದಾರರಿಗೆ ಒದಗಿಸಬೇಕು. ದಂಡ ಭರಿಸದಿದ್ದ ಕಾರಣ ಹಾಗೂ ಆಯೋಗದ ಆದೇಶ ಪಾಲನೆ ಮಾಡದ ಕಾರಣ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವ ಎಚ್ಚರಿಕೆ ನೀಡಲಾಗಿದೆ.

ಎರಡು ವರ್ಷ ಏಳು ತಿಂಗಳು ಕಳೆದರೂ ಮಾಹಿತಿ ನೀಡದ ಕಾರಣ ಮಾಹಿತಿ ಹಕ್ಕುಗಳ ಕಾಯ್ದೆ ಉಲ್ಲಂಘನೆ ಹಾಗೂ ಸರ್ವಜನಿಕ ಹಕ್ಕುಗಳ ಅಸಡ್ಡೆತನದಿಂದ ತೀವ್ರತೆಗೆ ಒಳಪಟ್ಟು ಆಯೋಗವು ನ್ಯಾಯವನ್ನು ನಿರ್ಧಾರ ಮಾಡಲು ಮುಂದಾಗಿದೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News