ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗೆ 12.11 ಕೋಟಿ ರೂ. ನಿವ್ವಳ ಲಾಭ: ವಿಶ್ವನಾಥ ಪಾಟೀಲ್

ರಾಯಚೂರು: ಕೊಪ್ಪಳ ಹಾಗೂ ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾರ್ಚ್ ಅಂತ್ಯದವರೆಗೆ ಒಟ್ಟು ರೂ. 23.84 ಕೋಟಿಗಳ ಕ್ರೋಢಿಕೃತ ಲಾಭಗಳಿಸಿದ್ದು, ಇದರಲ್ಲಿ ಬ್ಯಾಂಕಿನ ನಿಯಮಾನುಸಾರ ವಿವಿಧ ಅವಕಾಶಗಳನ್ನು ಕಲ್ಪಿಸಿದ ಬಳಿಕ ಒಟ್ಟು 12.11 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ರಾಯಚೂರು ಹಾಗೂ ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಅವರು ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 106 ವರ್ಷಗಳಿಂದ ಈ ಅವಳಿ ಜಿಲ್ಲೆಗಳ ಕೃಷಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರವನ್ನು ಬ್ಯಾಂಕ್ ನೀಡುತ್ತಾ ಬಂದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪಿಎಸಿಎಸ್) ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಕಲ್ಪಿಸಿದೆ. ಬ್ಯಾಂಕಿಗೆ 2024 ಅಂತ್ಯಕ್ಕೆ 563 ಸಹಕಾರ ಸಂಘಗಳು, ಒಂದು ಸರ್ಕಾರದ ಸೇರಿದಂತೆ ಒಟ್ಟು 564ಸದಸ್ಯತ್ವ ಪಡೆದುಕೊಂಡಿದ್ದು, 2025ರ ಅಂತ್ಯಕ್ಕೆ 574 ಸದಸ್ಯತ್ವವನ್ನು ಹೊಂದಿವೆ ಎಂದು ಹೇಳಿದರು.
ಶೇರುಬಂಡವಾಳ 2024ಕ್ಕೆ ಸಂಘಗಳಿಂದ 48.38 ಕೋಟಿ ರೂ., ಸರ್ಕಾರದಿಂದ 2.10 ಕೋಟಿ ಸೇರಿ ಒಟ್ಟು ರೂ. 50.48 ಕೋಟಿಗಳು, 2025ರ ಅಂತ್ಯಕ್ಕೆ ಸಂಘಗಳಿಂದ 49.42 ಕೋಟಿ ರೂ., ಸರ್ಕಾರದಿಂದ 2.10 ಕೋಟಿ ರೂ. ಸೇರಿದಂತೆ ಒಟ್ಟು ರೂ. 51.52 ಕೋಟಿಗಳು. ಕಳೆದ ವರ್ಷ 93.73 ಕೋಟಿ ರೂ., ವರ್ಷ ರೂ. 104.49 ಕೋಟಿಗಳ ನಿಧಿಗಳನ್ನು ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.
ಸ್ವಂತ ಬಂಡವಾಳ ಬ್ಯಾಂಕ್ ಕಳೆದ ವರ್ಷ ರೂ. 144.21 ಕೋಟಿ, ಈ ವರ್ಷ 156,01 ಕೋಟಿಗಳನ್ನು ಹೊಂದಿದೆ. ಕಳೆದ ವರ್ಷ 1318,56 ಕೋಟಿಗಳು, ಈ ವರ್ಷಕ್ಕೆ 1381,30 ಕೋಟಿಗಳನ್ನು ಬ್ಯಾಂಕ್ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 244.05 ಕೋಟಿಗಳು ಹಾಗೂ 2025ರ ಅಂತ್ಯಕ್ಕೆ 119.93 ಕೋಟಿಗಳಷ್ಟು ನಬಾರ್ಡ್ ಹಾಗೂ ಅಫೆಕ್ಸ್ ಬ್ಯಾಂಕ್‍ನಿಂದ ಸಾಲಗಳನ್ನು ಪಡೆದುಕೊಂಡಿದೆ ಎಂದು ವಿವರಿಸಿದರು.
ರೈತರ ಮರಣೋತ್ತರ ಪರಿಹಾರ ನಿಧಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ 2024 ಸೆಪ್ಟಂಬರ್ ತಿಂಗಳಿಂದ 31-3-2025ರವರೆಗೆ ಒಟ್ಟು 262 ರೈತರ ಸದಸ್ಯರಿಗೆ ರೂ. 1.16 ಕೋಟಿಗಳನ್ನು ಸಾಲದ ಖಾತೆಗೆ ಜಮಾ ಮಾಡುವ ಮೂಲಕ ಬಾಂಕ್ ನೆರವು ನೀಡಿದೆ. ಅಲ್ಲದೇ ಬ್ಯಾಂಕ್‍ನ ಗ್ರಾಹಕರಿಗೆ ಸೇವೆಗಳ ಕಲ್ಪಿಸಲು ಯುಪಿಐ ವ್ಯವಸ್ಥೆ ಮಾಡಲಾಗಿದೆ. ಯುಪಿಐ ಸೇವೆ ವ್ಯವಸ್ಥೆ ಮಾಡಿದ ರಾಜ್ಯದಲ್ಲಿಯೇ ಎರಡನೇ ಡಿಸಿಸಿ ಬ್ಯಾಂಕ್ ಆಗಿದೆ ಎಂದರು