ರಾಯಚೂರು | ಬಡವರ ಗುಡಿಸಲು ತೆರವುಗೊಳಿಸಲು ನೋಟಿಸ್ ; ಸಿಪಿಐಎಂ ಪ್ರತಿಭಟನೆ

Update: 2025-01-13 11:00 GMT

ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದ ಸರಕಾರಿ ಆಹಾರ ಗೋದಾಮು ಪಕ್ಕದಲ್ಲಿ ಅಕ್ರಮ ಅಂಗಡಿ ಬಿಟ್ಟು, ಬಡವರ ಗುಡಿಸಲು ತೆರವುಗೋಳಿಸಲು ನೋಟೀಸ್ ನೀಡಿದ್ದನ್ನು ಖಂಡಿಸಿ ನಿವೇಶನ ನೀಡಿ ಪುನರ್ವಸತಿ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಜಿಲ್ಲಾ ಹಾಗೂ ತಾಲೂಕು ಸಮಿತಿಯಿಂದ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಿಂಧನೂರು ಮುಖ್ಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಒತ್ತುವರಿ ತೆರವುಗೊಳಿಸಲು ಬೆಂಗಳೂರು ಭೂ ಕಬಳಿಕೆ ನಿಷೇದ ರಾಜ್ಯ ನ್ಯಾಯಾಲಯದ ಆದೇಶ ನೀಡಿದ ನಂತರ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದ ಬೆನ್ನಲ್ಲೆ ಸಿಂಧನೂರು ಸರಕಾರಿ ಆಹಾರ ಗೋದಾಮು ಜಾಗದ ಪಕ್ಕದಲ್ಲಿ 12ಕ್ಕೂ ಹೆಚ್ಚು ಪರಿಶಿಷ್ಟ ಪಂಗಡ ಜನಾಂಗದ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ.

ಕೂಲಿ ಕಾರ್ಮಿಕ ಕುಟುಂಬಗಳು ಸುಮಾರು 40 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವವರನ್ನು ತೆರವುಗೊಳಿಸಲು ರಾಯಚೂರು ಜಿಲ್ಲಾ ಆಹಾರ ಇಲಾಖೆ ಜ.20ಕ್ಕೆ ಗಡುವು ನೀಡಿ, ಅಕ್ರಮ ಅಂಗಡಿಗಳಿಗೆ ನೋಟೀಸ್ ನೀಡದೆ, (ಅಂಟಿಸದೆ)ಜನರ ಜೋಪಡಿ ಚಪ್ಪರದ ತಟ್ಟಿಗೆ ನೋಟೀಸ್ ಅಂಟಿಸಿದ್ದಾರೆ. ಬಡಜನರಿಗೊಂದು ನ್ಯಾಯ-ಬಲ್ಲಿದವರಿಗೊಂದು ನ್ಯಾಯ ನಾವು ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಕಷ್ಟಕ್ಕೆ ನೆರವಿಗೆ ಬರದೇ ಬೀದಿಗೆ ತಳ್ಳಿ ಕೈತೊಳೆದುಕೊಳ್ಳುವ ಹಂತದಲ್ಲಿ ರಾಯಚೂರು ಆಹಾರ ಇಲಾಖೆ ಮತ್ತು ಸಿಂಧನೂರು ತಾಲೂಕಾಡಳಿತ ಸಜ್ಜಾಗಿದೆ. ನಮಗೆ ಪುನರ್ವಸತಿ ಕಲ್ಪಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲವೆಂದು ಎಚ್ಚರಿಕೆ ನೀಡಿದರು

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿಯ ಸದಸ್ಯ ಎಂ.ಗಂಗಾಧರ, ಜಿ. ಅಮರೇಶ, ಹೆಚ್.ಆರ್.ಹೊಸಮನಿ, ಎಂ.ನಿರಂಜನ್ ಕುಮಾರ, ಹನುಮಂತಪ್ಪ ಗೋಡಿಹಾಳ, ರಾಜು ನಾಯಕ ಸಂತ್ರಸ್ತರಾದ ಹನುಮಂತಮ್ಮ, ಹೊನ್ನಮ್ಮ, ಯಮನೂರಿ, ಲಕ್ಶ್ಮೀ, ಅಯ್ಯಮ್ಮ, ಲತಾ, ಮಲ್ಲಮ್ಮ, ಚನ್ನಮ್ಮ, ಯಮನಮ್ಮ, ಅಂಬಮ್ಮ, ಈರಮ್ಮ, ಶಿವಲಿಂಗಮ್ಮ, ಶರಣಮ್ಮ, ಯಲ್ಲಮ್ಮ, ಶಂಕ್ರಮ್ಮ, ಶ್ಯಾಮಮ್ಮ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News