ರಾಯಚೂರು | ಸ್ಕೂಟಿ-ಕಾರು ನಡುವೆ ಡಿಕ್ಕಿ ; ಚರಂಡಿಗೆ ಉರುಳಿದ ಕಾರು
Update: 2024-12-31 17:32 GMT
ರಾಯಚೂರು : ನಗರದ ಹೈದರಾಬಾದ್ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಎದುರು ಬಂದ ಸ್ಕೂಟಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಇಳಿದ ಘಟನೆ ನಗರದ ಎಸ್ ಪಿ ಕಚೇರಿ ಮುಂಭಾಗ ನಡೆದಿದೆ.
ರಾಯಚೂರಿನಿಂದ ಹೈದರಾಬಾದ್ ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167)ಯಲ್ಲಿ ಬೆಳಿಗ್ಗೆ ಘಟನೆ ನಡೆದಿದೆ.
ಕಾರು ಚಾಲಕ ಡಾ.ಗೊಪಾಲಗೆ ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಕೂಟಿ ಸವಾರರಾದ ಜಯಲಕ್ಷ್ಮೀ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೊಪಾಲ್ ನಾಯಕ ಅವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.