ರಾಯಚೂರು: ಹಾವು ಕಚ್ಚಿ ವಿದ್ಯಾರ್ಥಿ ಅಸ್ವಸ್ಥ
Update: 2025-01-01 06:09 GMT
ರಾಯಚೂರು: ಹಾವು ಕಚ್ಚಿದ ಪರಿಣಾಮ ವಿದ್ಯಾರ್ಥಿಯೋರ್ವ ಅಸ್ವಸ್ಥಗೊಂಡ ಘಟನೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ
ಗಾಯಾಳು ವಿದ್ಯಾರ್ಥಿಯನ್ನು ಸಾಯಿ ಇಂಟರ್ ನ್ಯಾಶನಲ್ ವಸತಿ ಶಾಲೆಯ ಅಖಿಲ್ ಸುರೇಶ (10) ಎಂದು ಗುರುತಿಸಲಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಬಿಇಒ ಚಂದ್ರಶೇಖರ ದೊಡ್ಡಮನಿ ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.