ರಾಯಚೂರು | ವಿದ್ಯುತ್ ಕೇಬಲ್ ಸ್ಪರ್ಶಿಸಿ ಯುವಕ ಮೃತ್ಯು
Update: 2024-12-16 16:56 GMT
ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ಸೋಲಾರ್ ಪವರ್ ಪ್ಲಾಂಟ್ ನಲ್ಲಿ ವಿದ್ಯುತ್ ಕೇಬಲ್ ಸ್ಪರ್ಶಿಸಿ ಯುವಕ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮಾಚನೂರು ಗ್ರಾಮದ ಸೀಮೆಯಲ್ಲಿ ಇರುವ ಮೀರಾ ಸೋಲಾರ್ ಪವರ್ ಪ್ಲಾಂಟಿನಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತಪಟ್ಟ ಯುವಕ ಅಜಮೀರ್ ಪಾಷಾ (18) ಎಂದು ಗುರುತಿಸಲಾಗಿದೆ. ಮೃತ ಯುವಕ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.