ಸೋಲುತ್ತಿರುವ ವ್ಯಕ್ತಿಯ ಕೊನೆಯ ಅಸ್ತ್ರವೇ ಕಣ್ಣೀರು : ಸಿ.ಪಿ.ಯೋಗೇಶ್ವರ್

Update: 2024-11-01 15:35 GMT

ಬೆಂಗಳೂರು : ‘ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಆತನ ಕೊನೆಯ ಅಸ್ತ್ರವೇ ಕಣ್ಣೀರು. ನಾಯಕನಾದವ ಜನರ ಕಣ್ಣೀರು ಒರೆಸಬೇಕೇ ವಿನಃ ಎಂದಿಗೂ ಕಣ್ಣೀರು ಹಾಕಬಾರದು’ ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ‘ನಿಖಿಲ್ ಇದೀಗ ತಾನೆ ನನ್ನ ತಾಲೂಕಿಗೆ ಬಂದಿದ್ದಾರೆ. ಅವರಿಗೂ ಏನೂ ಪರಿಚಯವಿಲ್ಲದೆ ಇಲ್ಲಿ ಕಣ್ಣೀರಿಡುವುದು ರಾಜಕೀಯ ಗಿಮಿಕ್. ಯಾವುದೇ ಅಭ್ಯರ್ಥಿ ಕಣ್ಣೀರು ಹಾಕಿ ಮತದಾರರ ಮನಸ್ಸು ಗೆಲ್ಲಲು ಆಗುವುದಿಲ್ಲ. ಅವರ ತಂದೆ ಮಾಡಿದ ಅವ್ಯವಸ್ಥೆಗೆ ಸಾವಿರಾರು ಜನ ಕಣ್ಣೀರು ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

‘ಈ ಉಪ ಚುನಾವಣೆ ನನಗೆ ಹಬ್ಬದ ಚುನಾವಣೆ, ಜನತೆ ಬೆಂಬಲಿಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಆಡಳಿತ ದೌರ್ಬಲ್ಯ, ನಿಷ್ಕ್ರಿಯತೆಯಿಂದ ಜನ ಬೇಸತ್ತಿದ್ದಾರೆ. ಅವರು ಸಿಎಂ ಆಗಿದ್ದಾಗ ಒಂದೇ ಒಂದು ಮನೆ ನೀಡಿಲ್ಲ. ಕುಮಾರಸ್ವಾಮಿ ಮೊದಲು ಪತ್ನಿ ಕರೆದುಕೊಂಡು ಬಂದರು. ಇದೀಗ ಪುತ್ರನನ್ನು ಚುನಾವಣೆಗೆ ಕರೆತಂದಿದ್ದಾರೆ. ಇವರ ಮೇಲೆಯೇ ವಿಶ್ವಾಸವಿಲ್ಲ, ಇನ್ನು ಮಗನನ್ನು ಯಾರು ನಂಬುತ್ತಾರೆ ಎಂದು ಪ್ರಶ್ನಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News