ಪತ್ರಿಕಾ ಮಾಹಿತಿ ಬ್ಯೂರೋದ ಪ್ರಧಾನ ನಿರ್ದೇಶಕರಾಗಿ ಶೇಫಾಲಿ ಶರಣ್ ಅಧಿಕಾರ ಸ್ವೀಕಾರ

Update: 2024-04-02 07:46 GMT

ಬೆಂಗಳೂರು: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಧಾನ ಮಹಾನಿರ್ದೇಶಕರಾಗಿ ಶೇಫಾಲಿ ಬಿ. ಶರಣ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಮನೀಷ್ ದೇಸಾಯಿ ಅವರ ನಿವೃತ್ತಿಯ ನಂತರ  ಅಧಿಕಾರ ಸ್ವೀಕರಿಸಿದ ಶೇಫಾಲಿ ಶರಣ್ ಅವರು ಭಾರತೀಯ ಮಾಹಿತಿ ಸೇವೆಯ 1990 ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.

ಮೂರು ದಶಕಗಳ ಕಾಲದ ವಿಶಿಷ್ಟ ವೃತ್ತಿಜೀವನದಲ್ಲಿ ಶೇಫಾಲಿ ಬಿ. ಶರಣ್ ಅವರು ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಾಹಿತಿ ಮತ್ತು ಪ್ರಸಾರದಂತಹ ಸಚಿವಾಲಯಗಳಿಗೆ ಪತ್ರಿಕಾ ಮಾಹಿತಿ ಕಚೇರಿ ಅಧಿಕಾರಿಯಾಗಿ ದೊಡ್ಡ ಪ್ರಮಾಣದ ಮಾಧ್ಯಮ ಪ್ರಚಾರ ಕಾರ್ಯಗಳನ್ನು ನಿರ್ವಹಿಸುವ ಕೇಡರ್ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಭಾರತದ ಚುನಾವಣಾ ಆಯೋಗದ ವಕ್ತಾರರಾಗಿ ಸೇವೆ ಸಲ್ಲಿಸಿರುವ ಶೇಫಾಲಿ ಅವರು ಆರೋಗ್ಯ ಸಚಿವಾಲಯದ ನಿರ್ದೇಶಕರಾಗಿ (ಸಾಂಪ್ರದಾಯಿಕ ಔಷಧಗಳು / ಆಯುಷ್ ಇಲಾಖೆ (2002-2007), ಹಣಕಾಸು ಸಚಿವಾಲಯದಲ್ಲಿ ನಿರ್ದೇಶಕರಾಗಿ (ಆರ್ಥಿಕ ವ್ಯವಹಾರಗಳ ಇಲಾಖೆ 2013-2017), ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ (ಮಾಹಿತಿ ನೀತಿ, 2000-2002) ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಒ ಎಸ್ ಡಿ) ಮತ್ತು 2007 ರಿಂದ 2008 ರವರೆಗೆ ಲೋಕಸಭೆಯ ಸಚಿವಾಲಯದ ಲೋಕಸಭೆ ದೂರದರ್ಶನದ ಆಡಳಿತ ಮತ್ತು ಹಣಕಾಸು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ನಂತರ,ಶೇಫಾಲಿ ಬಿ. ಶರಣ್ ಶರಣ್ ಅವರನ್ನು ಪತ್ರಿಕಾ ಮಾಹಿತಿ ಬ್ಯೂರೋದ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News