ಶಿವಮೊಗ್ಗ | ಮೈಮೇಲೆ ಬಿಸಿ ಚಹಾ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಮೃತ್ಯು
Update: 2024-11-01 12:15 GMT
ಶಿವಮೊಗ್ಗ: ಮೈಮೇಲೆ ಬಿಸಿ ಚಹಾ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವೊಂದು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ರಾಜೇಶ್ ಹಾಗು ಅಶ್ವಿನಿ ದಂಪತಿ ಪುತ್ರ ಅಥರ್ವ (2) ಎಂದು ಗುರುತಿಸಲಾಗಿದೆ. ಕಳೆದ ವಾರ ರಾಜೇಶ್ ಅವರ ನೆರೆಮನೆ ನಿವಾಸಿಯೊಬ್ಬರು ಮೃತಪಟ್ಟಿದ್ದರು. ಹೀಗಾಗಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಅಶ್ವಿನಿ ಚಹಾ ರೆಡಿ ಮಾಡಿಟ್ಟಿದ್ದರು. ಆದರೆ ಚಹಾ ಪಾತ್ರೆಯನ್ನು ಮೈಮೇಲೆ ಬೀಳಿಸಿಕೊಂಡು ಅಥರ್ವ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ.
ಗಾಯಗೊಂಡ ಮಗುವಿಗೆ ಕಳೆದೊಂದು ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.