ಚಿಕ್ಕಜಂಬೂರ: ಮಸ್ಜಿದೆ ಹಝ್ರತ್ ಬಿಲಾಲ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
Update: 2025-03-24 10:45 IST

ಶಿಕಾರಿಪುರ: "ಧರ್ಮವು ಕೇವಲ ಆರಾಧನೆಯನ್ನು ಕಲಿಸಲು ಬಂದಂತಹದ್ದಲ್ಲ ಬದಲಾಗಿ ಅದು ಮನುಷ್ಯರನ್ನು ಬೆಸೆಯುವಂತಹ ಅವರ ಸಂಬಂಧಗಳನ್ನು ಸುಧಾರಿಸುವಂತಹ ಮಾರ್ಗದರ್ಶನ ಮಾಡುತ್ತದೆ" ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಅವರು ಮಸ್ಜಿದೆ ಹಝ್ರತ್ ಬಿಲಾಲ್ ಚಿಕ್ಕಜಂಬೂರ ವತಿಯಿಂದ ಹಮ್ಮಿಕೊಂಡ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಮಾತನಾಡಿದರು.
ತಾಲೂಕು ಗ್ಯಾರೆಂಟಿ ಯೋಜನೆ ಸಮಿತಿ ಅಧ್ಯಕ್ಷ ನಾಗರಾಜ ಗೌಡ ಮಾತನಾಡಿ " ಮುಸ್ಲಿಮರು ಆಚರಿಸುವಂತಹ ಉಪವಾಸ ವೃತದಿಂದಾಗಿ ಮನುಷ್ಯನ ಚಾರಿತ್ರ್ಯದಲ್ಲಿ ಸುಧಾರಣೆ ಉಂಟಾಗುತ್ತದೆ. ಇಂತಹ ತಿಳುವಳಿಕೆ ಮೂಡಿಸುವಂತಹ ಸೌಹಾರ್ದ ಸಮಾರಂಭಗಳು ಪ್ರಸ್ತುತ ಸಮಾಜದ ಅಗತ್ಯ" ಎಂದು ಹೇಳಿದರು.
ಮುಹಮ್ಮದ್ ಆಸೀಫ್ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.ಜಮಾಅತೆ ಇಸ್ಲಾಮೀ ಹಿಂದ್ ಚಿಕ್ಕಜಂಬೂರ ಅಧ್ಯಕ್ಷ ಶಮೀರ್ ಬೇಗ್ ಮುಂತಾದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


