ಶಿವಮೊಗ್ಗ | ಭೀಕರ ರಸ್ತೆ ಅಪಘಾತ; ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು, ನಾಲ್ವರಿಗೆ ಗಂಭೀರ ಗಾಯ
Update: 2025-01-18 21:44 IST

ಶಿವಮೊಗ್ಗ: ಟ್ರ್ಯಾಕ್ಟರ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಭದ್ರಾವತಿ ತಾಲೂಕು ಬಾರಂದೂರು ಕ್ರಾಸ್ ಬಳಿ ನಡೆದಿದೆ.
ವಿದ್ಯಾರ್ಥಿನಿ ಕೃತಿ (21) ಮೃತಪಟ್ಟವರು. ಶಿವಮೊಗ್ಗದಿಂದ ಕುಟುಂಬದೊಂದಿಗೆ ತರೀಕೆರೆಯ ಅಮೃತಾಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.