ಶಿವಮೊಗ್ಗ : ಬ್ಯಾರೀಸ್‌ನಿಂದ ‘ಗ್ರೀನ್ ರನ್’ ಮ್ಯಾರಥಾನ್

Update: 2024-12-23 15:40 GMT

ಶಿವಮೊಗ್ಗ : ನಗರದ ಬ್ಯಾರೀಸ್ ಸಿಟಿ ಸೆಂಟರ್, ಡೆಕತ್ಲಾನ್ ವತಿಯಿಂದ ಎರಡನೇ ಆವೃತ್ತಿಯ ‘ಗ್ರೀನ್ ರನ್’ (ಹಸಿರು ಓಟ) ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಗಿತ್ತು.

ಬ್ಯಾರೀಸ್ ಸಿಟಿ ಸೆಂಟರ್‌ನಿಂದ ಆರಂಭವಾದ ಮ್ಯಾರಥಾನ್ ಓಟದಲ್ಲಿ ನಗರದ ನೂರಾರು ಜನರು ಭಾಗವಹಿಸಿದ್ದರು.

ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಯಾರೀಸ್ ಗ್ರೂಪ್‌ನ ನಿರ್ದೇಶಕ ಸಿದ್ದೀಕ್ ಬ್ಯಾರಿ, ನಗರವನ್ನು ಹಸಿರು ಮಾಡುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ನಡೆಸುತ್ತಾ ಬಂದಿದೆ. ಇಡೀ ನಗರವು ಹಸಿರು ಕವಚದಿಂದ ಇರಬೇಕು ಎಂಬುವುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಇಂದು ಸಾವಿರ ಸಸಿಗಳನ್ನು ನಗರದ ಸುತ್ತಮುತ್ತಲು ನೆಡಲು ವಿತರಿಸಲಾಗಿದೆ ಎಂದು ತಿಳಿಸಿದರು.

ಹಸಿರು ಇಂದು ನಮ್ಮ ಉಸಿರಾಗಿದೆ. ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜೊತೆಗೆ ಆರೋಗ್ಯವು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಹಸಿರು ಉಳಿಸಲು ಮತ್ತು ಬೆಳೆಸಲು ಸಮುದಾಯದತ್ತ ಸಂಬಂಧವನ್ನು ಬೆಸೆದುಕೊಂಡಿದೆ ಎಂದು ಸಿದ್ದೀಕ್ ಬ್ಯಾರಿ ಹೇಳಿದರು.

ಇತ್ತೀಚೆಗೆ ನಿಧನರಾದ ‘ವೃಕ್ಷಮಾತೆ’ ಪದ್ಮಶ್ರೀ ಪುರಸ್ಕೃತೆ ಡಾ.ತುಳಸಿಗೌಡ ಅವರನ್ನು ಇದೇ ವೇಳೆ ಸ್ಮರಿಸಲಾಯಿತು. ಕಾರ್ಯಕ್ರಮಕ್ಕೆ ನ್ಯಾಷನಲ್ ಇನ್‌ಫ್ರಾ ಬಿಲ್ಡ್ ಪ್ರೈ.ಲಿ., ಡೆಕತ್ಲಾನ್‌ನ ಸಂಸ್ಥೆಗಳು ಸಹಕಾರ ನೀಡಿದವು.

Delete Edit

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News