ಡಿ.23ರಂದು ಬ್ಯಾರಿಸ್ ಸಿಟಿ ಸೆಂಟರ್ ವತಿಯಿಂದ ಪರಿಸರ ಉಳಿವಿಗಾಗಿ ಮ್ಯಾರಥಾನ್ ಓಟ, ಶಾಪಿಂಗ್ ಫೆಸ್ಟಿವಲ್

Update: 2023-12-21 18:26 GMT

ಶಿವಮೊಗ್ಗ: ನಗರದ ಬ್ಯಾರಿಸ್ ಸಿಟಿ ಸೆಂಟರ್(ಮಾಲ್)ನ ವತಿಯಿಂದ ಡಿ.23ರಂದು ಪರಿಸರ ಉಳಿವಿಗಾಗಿ ಮ್ಯಾರಥಾನ್ ಓಟ ಮತ್ತು 23ರಿಂದ 26ರ ವರೆಗೆ ಶಾಪಿಂಗ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿದೆ ಎಂದು ಸಿಟಿ ಸೆಂಟರ್‌ನ ಮ್ಯಾನೇಜರ್ ಮೊಹಿದ್ದಿನ್ ಹೇಳಿದರು.

 ಸಿಟಿ ಸೆಂಟರ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾರಿಸ್ ಸೆಂಟರ್ ಪರಿಸರ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪರಿಸರ ನಾಶದಿಂದ ಉಂಟಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಈ ಫ್ಯಾಮಿಲ್‌ ರನ್ ಆಯೋಜಿಸಲಾಗಿದೆ ಎಂದರು.

ಈ ಓಟದ ಮೂಲಕ ಸಮುದಾಯವನ್ನು ಒಟ್ಟುಗೋಡಿಸುವುದು, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು, ಪರಿಸರ ವಿನಾಶದ ಬಗ್ಗೆ ತಿಳಿಸುವುದು, ಜಾಗೃತಿ ಮೂಡಿಸುವುದು ಈ ನಡೆಗೆಯ ಉದ್ದೇಶವಾಗಿದೆ ಎಂದರು.

ಈ ನಡೆಗೆಗೆ ಡಿ. 23ರ ಬೆಳಿಗ್ಗೆ 6.30ಕ್ಕೆ ಪದ್ಮಶ್ರೀ ತುಳಸಿಗೌಡ ಅವರು ಚಾಲನೆ ನೀಡುವರು. ಈ ಓಟವು ನೆಹರು ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಶಂಕರಮಠ ರಸ್ತೆ, ಬಿ.ಹೆಚ್.ರಸ್ತೆ, ಮೂಲಕ ಸಾಗುತ್ತದೆ. ಸುಮಾರು 3.8 ಕಿ.ಮೀ.ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದರ ಜೊತೆಗೆ ಡಿ.23ರಿಂದ 26ರವರೆಗೆ ಬ್ಯಾರಿಸ್ ಸೆಂಟರ್‌ನಲ್ಲಿ ಶಾಪಿಂಗ್ ಫೆಸ್ಟಿವಲ್ ನಡೆಯಲಿದೆ. ಸರಳವಾದ ಈವೆಂಟುಗಳು ಕೂಡ ಇರುತ್ತವೆ. ಒಳಾಂಗಣದಲ್ಲಿ ಮನೋರಂಜನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದೊಂದು ಗ್ರಾಹಕರ ಹಬ್ಬವಾಗಿದೆ. ಸಾರ್ವಜನಿಕರು ಮ್ಯಾರಥಾನ್ ಓಟ ಮತ್ತು ಗ್ರಾಹಕರ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿಸ್ ಸೆಂಟರ್‌ನ ಮುಖ್ಯಸ್ಥ ನಂದ್‌‌ ಕುಮಾರ್, ಅಮೃತ್, ಸನ್ನಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News