ಶಿವಮೊಗ್ಗ| ವೇಶ್ಯಾವಾಟಿಕೆ ದಂಧೆ ಆರೋಪ; ಇಬ್ಬರ ಬಂಧನ

Update: 2023-12-21 12:35 GMT

ಶಿವಮೊಗ್ಗ: ನಗರದ ಗಾಂಧಿನಗರ ಬಳಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಗಾಂಧಿನಗರದ 1ನೇ ಪ್ಯಾರಲಲ್ ರಸ್ತೆಯ ಕಟ್ಟಡವೊಂದರ ನೆಲ ಮಾಳಿಗೆಯಲ್ಲಿ ದಂಧೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಪೊಲೀಸರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಕಚೇರಿ ಮತ್ತು ಗೋಡೌನ್‌ಗಾಗಿ ಕಟ್ಟಡವೊಂದರ ನೆಲ ಮಾಳಿಗೆಯನ್ನು ಯುವಕನೊಬ್ಬ ಬಾಡಿಗೆಗೆ ಪಡೆದಿದ್ದ. ಅದರಲ್ಲಿಯೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.

ಜಯನಗರ ಠಾಣೆ ಇನ್ಸ್‌ಪೆಕ್ಟರ್ ಸಿದ್ದನಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News