ಶಿವಮೊಗ್ಗ | ಮಳೆಯ ಅಬ್ಬರಕ್ಕೆ ಸರಕಾರಿ ಶಾಲೆಯ ಗೋಡೆ ಕುಸಿತ : ತಪ್ಪಿದ ಅನಾಹುತ

Update: 2024-07-23 14:39 GMT

ಶಿವಮೊಗ್ಗ: ಮಳೆಯ ಅಬ್ಬರಕ್ಕೆ ಸರಕಾರಿ ಶಾಲೆಯೊಂದರ ಗೋಡೆ ಕುಸಿದ ಘಟನೆ ಸೊರಬ ತಾಲ್ಲೂಕಿನ ಅನವಟ್ಟಿಯಲ್ಲಿ ನಡೆದಿದೆ.

ಅನವಟ್ಟಿಯ ಉರ್ದು ಸರಕಾರಿ ಶಾಲೆಯ ಗೋಡೆ ಕುಸಿದಿದ್ದು, ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದೆ. ವಿದ್ಯಾರ್ಥಿಗಳು ವಿಶ್ರಾಂತಿಗೆ ತೆರಳಿರುವ ಸಮಯದಲ್ಲಿ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಅನೇಕ ದಿನಗಳಿಂದ ಅಧಿಕಾರಿಗಳಿಗೆ ದುರಸ್ತಿಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News