ಶಿವಮೊಗ್ಗ| ಡಿ.26ಕ್ಕೆ ಎಸ್.ಬಂಗಾರಪ್ಪ ಸವಿ ನೆನಪು ಕಾರ್ಯಕ್ರಮ

Update: 2023-12-23 12:00 GMT

ಶಿವಮೊಗ್ಗ: ಎಸ್.ಬಂಗಾರಪ್ಪ ಪೌಂಡೇಶನ್, ಬಂಗಾರಪ್ಪ ವಿಚಾರ ವೇದಿಕೆ, ಅಭಿಮಾನಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಡಿ.26ರಂದು ಸಂಜೆ 4ಕ್ಕೆ ಸೊರಬದ ಬಂಗಾರಧಾಮದಲ್ಲಿ ಎಸ್.ಬಂಗಾರಪ್ಪ ಸವಿ ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ವೇದಿಕೆಯ ಮುಖ್ಯಸ್ಥರು.ನಟ ನಾಗರಾಜ್ ಮೂರ್ತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್. ಬಂಗಾರಪ್ಪನವರು ಸಮಾಜವಾದಿ ಚಿಂತಕರಾಗಿದ್ದರು. ರಾಜ್ಯದ ರಾಜಕಾರಣಕ್ಕೆ ಸ್ಪಷ್ಟ ದಿಕ್ಕು ತೋರಿಸಿದವರು. ಬಡವರ ಪಾಲಿನ ಆಶಾಕಿರಣವಾಗಿದ್ದರು. ಶಾಂತವೇರಿ ಗೋಪಾಲಗೌಡರ ಕುಲುಮೆಯಲ್ಲಿ ಬೆಂದು ನೊಂದವರ ಕಣ್ಣೀರು ಒರೆಸಿದ ಧೀಮಂತ ವ್ಯಕ್ತಿ, ಸುಸಂಸ್ಕೃತ ರಾಜಕಾರಣಿ ಇಂತಹ ಮಹಾನ್ ವ್ಯಕ್ತಿಯ 12ನೇ ವರ್ಷದ ಪುಣ್ಯ ಸ್ಮರಣೆ ನೆನಪಿನ ಕಾರ್ಯಕ್ರಮವನ್ನು ಸೊರಬದಲ್ಲಿಯೇ ಆಯೋಜಿಸಲಾ ಗಿದೆ ಎಂದರು.

ಈಗಾಗಲೇ ಬಂಗಾರಪ್ಪ ಸ್ಮಾರಕ ಆರಂಭವಾಗಿದೆ. ಅದರ ಮೂಲಕ ಹಲವು ಸಾಮಾಜಿಕ ಕಾರ್ಯ ಕ್ರಮಗಳನ್ನು, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಬಂಗಾರಪ್ಪ ಪೌಂಡೇಶನ್ ಮತ್ತು ವಿಚಾರ ವೇದಿಕೆಯಿಂದ ಕಲಾ ಕ್ರೀಡೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮತ್ತು ಪ್ರಶಸ್ತಿಗಳನ್ನು ನೀಡುತ್ತ ಬಂದಿದ್ದೇವೆ ಎಂದರು.

ಡಿ.26ರ ಸಂಜೆ 4ಕ್ಕೆ ಬಂಗಾರಧಾಮದಲ್ಲಿ ಹಮ್ಮಿಕೊಂಡಿರುವ ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಉದ್ಘಾಟಿಸುವರು. ಸಚಿವ ಎಚ್.ಕೆ. ಪಾಟೀಲ್ , ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಗೀತಾ ಶಿವರಾಜ್‌ಕುಮಾರ್ ಉಪಸ್ಥಿತರಿರಲಿದ್ದಾರೆ. ಡಾ.ಅನೀಶ್ ವಿದ್ಯಾಶಂಕರ್ ರವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ ಎಂದು ಮಾಹಿತಿ ನೀಡಿದರು.

ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ಮಾತನಾಡಿ, ʼಬಂಗಾರಪ್ಪ ವರ್ಣಮಯ ವ್ಯಕ್ತಿ ಬರಗಾಲದಂತಹ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ , ರಸಗೊಬ್ಬರ ಕೊಟ್ಟವರು, ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಕಲ್ಯಾಣಕ್ಕಾಗಿ ದುಡಿದವರು. ಇಂತವರ ಪುಣ್ಯ ಸ್ಮರಣೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಗೋಪಾಲಕೃಷ್ಣ ಟಿ.ವಿ, ಶಮಂತ್, ಗಿರೀಶ್, ಹರೀಶ್ ಇದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News