ಶಿವಮೊಗ್ಗ | ಶ್ರೀಗಂಧ ಸಾಗಾಟ: ಇಬ್ಬರು ಆರೋಪಿಗಳ ಬಂಧನ

Update: 2023-09-08 04:19 GMT

ಶಿವಮೊಗ್ಗ: ಭದ್ರಾ ನಾಲೆಯ ದಂಡೆಯ ಮೇಲೆ ಅಕ್ರಮಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಕರಕುಚ್ಚಿ ಗ್ರಾಮದ ರಾಮು ಹಾಗೂ ಇಲ್ಯಾಸ್ ಬಂಧಿತ ಆರೋಪಿಗಳು. ಇವರಿಂದ 12.1 ಕೆ.ಜಿ. ಶ್ರೀಗಂಧದ ಚಕ್ಕೆ ಹಾಗೂ ಸಾಗಾಟಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರಾವತಿಯ ಡಿಸಿಎಫ್ ಆಶಿಶ್ ರೆಡ್ಡಿ ಹಾಗೂ ಎಸಿಎಫ್ ದಿನೇಶ್ ಎಸ್.ಒ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದು, ಲಕ್ಕವಳ್ಳಿ ವಲಯದ ವಲಯ ಅರಣ್ಯಾಧಿಕಾರಿ ವಾಗೀಶ್ ಬಿ.ಜೆ. ಉಪವಲಯ ಅರಣ್ಯ ಅಧಿಕಾರಿಗಳಾದ ಮನೋಜ್ ಕೆ.ಎಸ್., ಜಗದೀಶ್ ಬಿ, ಶಂಕರನಾರಾಯಣ ಎ, ಯೋಗಾನಂದ ಕೆ.ಸಿ., ಮಾರುತಿ ಬಾಬು, ಅರಣ್ಯಾಧಿಕಾರಿಗಳಾದ ಮಂಜುನಾಥ ಮೊಗೇರ, ಸುಬ್ರಹ್ಮಣ್ಯ, ಸಚಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News