ಶಿವಮೊಗ್ಗ: ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

Update: 2023-12-30 11:59 GMT

ಶಿವಮೊಗ್ಗ: ಕೈದಿಗಳಿಗೆ ಗಾಂಜಾ, ಮೊಬೈಲ್ ನೀಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲಿನ ಬಳಿ ನಡೆದಿದೆ.

 ಆರೋಪಿಗಳು ಕೈದಿಗಳಿಗೆ ಗಾಂಜಾ ಹಾಗೂ ಮೊಬೈಲನ್ನು ಪ್ಯಾಕ್ ಮಾಡಿ ಹೊರಗಿನಿಂದ ಎಸೆಯಲು ಯತ್ನಿಸುತ್ತಿದ್ದರು. ಆರೋಪಿಗಳ ಈ ಚಲನವಲನಗಳನ್ನು ಜೈಲು ಸಿಬ್ಬಂದಿಗಳು ಸಿಸಿ ಕ್ಯಾಮರಾದಲ್ಲಿ ಗಮನಿಸಿದ್ದರಿಂದ, ಕೂಡಲೇ ಇಬ್ಬರನ್ನು ಬೆನ್ನತ್ತಿದ್ದ ಸೆಂಟ್ರಲ್ ಜೈಲಿನ ಸಿಬ್ಬಂದಿಗಳು  2 ಕಿ.ಮೀ ವರೆಗೆ ಬೆನ್ನಟ್ಟಿ ಆರೋಪಿಗಳನ್ನು ಹಿಡಿದಿದ್ದಾರೆ.

ಬಂಧಿತರಿಂದ 29 ಗಾಂಜಾ ಪ್ಯಾಕೆಟ್, 1 ಮೊಬೈಲ್, 2 ಚಾರ್ಜರ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ದೂರು ದಾಖಲಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News