ಪ್ರೈವೆಸಿ ಒಪ್ಪಂದದ 725 ಮಿಲಿಯನ್ ಡಾಲರ್ ದುಡ್ಡಿನಲ್ಲಿ ತಮ್ಮ ಪಾಲು ಪಡೆಯಲು ಫೇಸ್ಬುಕ್ ಬಳಕೆದಾರರಿಗೆ ಅವಕಾಶ
ಫೇಸ್ಬುಕ್ ಸಂಸ್ಥೆ ತನ್ನ ಬಳಕೆದಾರರ ಖಾತೆ ಮಾಹಿತಿಯನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆಗೆ ಬಳಸಲು ಅನುಮತಿಸಿದ್ದಕ್ಕೆ ಪ್ರತಿಯಾಗಿ ಫೇಸ್ಬುಕ್ ಮಾತೃ ಸಂಸ್ಥೆ ಮೆಟಾ ಪಾವತಿಸಲು ಒಪ್ಪಿರುವ 725 ಮಿಲಿಯನ್ ಡಾಲರ್ ಪ್ರೈವೆಸಿ ಸೆಟ್ಲ್‌ಮೆಂಟ್ ಮೊತ್ತದಲ್ಲಿ ತಮ್ಮ ಪಾಲನ್ನೂ ಪಡೆದುಕೊಳ್ಳಲು ಅಮೆರಿಕಾದಲ್ಲಿರುವ ಫೇಸ್ಬುಕ್ ಬಳಕೆದಾರರು ಅರ್ಜಿ ಸಲ್ಲಿಸಬಹುದಾಗಿದೆ.
ಕ್ಯಾಲಿಫೋರ್ನಿಯಾ: ಫೇಸ್ಬುಕ್ ಸಂಸ್ಥೆ ತನ್ನ ಬಳಕೆದಾರರ ಖಾತೆ ಮಾಹಿತಿಯನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆಗೆ ಬಳಸಲು ಅನುಮತಿಸಿದ್ದಕ್ಕೆ ಪ್ರತಿಯಾಗಿ ಫೇಸ್ಬುಕ್ ಮಾತೃ ಸಂಸ್ಥೆ ಮೆಟಾ ಪಾವತಿಸಲು ಒಪ್ಪಿರುವ 725 ಮಿಲಿಯನ್ ಡಾಲರ್ ಪ್ರೈವೆಸಿ ಸೆಟ್ಲ್‌ಮೆಂಟ್ ಮೊತ್ತದಲ್ಲಿ ತಮ್ಮ ಪಾಲನ್ನೂ ಪಡೆದುಕೊಳ್ಳಲು ಅಮೆರಿಕಾದಲ್ಲಿರುವ ಫೇಸ್ಬುಕ್ ಬಳಕೆದಾರರು ಅರ್ಜಿ ಸಲ್ಲಿಸಬಹುದಾಗಿದೆ.ಮೇ 24, 2007 ಹಾಗೂ ಡಿಸೆಂಬರ್ 22, 2022 ರ ನಡುವೆ ಫೇಸ್ಬುಕ್ ಖಾತೆಯನ್ನು ಹೊಂದಿದ್ದ ಯುಎಸ್ ನಾಗರಿಕರು ಹಣ ಪಡೆಯಲು ಅರ್ಹರಾಗಿದ್ದು ಆಗಸ್ಟ್ 25ರೊಳಗಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕಿದೆ.
ಕ್ಯಾಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆಯು 2016ರಲ್ಲಿ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದ ಸಂಸ್ಥೆಯಾಗಿದೆ.
ಸುಮಾರು 8.7 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ಪಡೆದುಕೊಳ್ಳಲು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್ಬುಕ್ ಆಪ್ ಡೆವಲಪರ್‌ಗಳಿಗೆ ಹಣ ಪಾವತಿಸಿದ್ದ ಅಂಶ 2018ರಲ್ಲಿ ಬೆಳಕಿಗೆ ಬಂದಿತ್ತು. ಹೀಗೆ ದೊರೆತ ಡೇಟಾವನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ 45ನೇ ಅಮೆರಿಕಾ ಅಧ್ಯಕ್ಷರಾಗಲು ಚುನಾವಣೆ ಸ್ಪರ್ಧಿಸಿದ್ದ ಟ್ರಂಪ್ ಅವರ ಪ್ರಚಾರ ಕಾರ್ಯವನ್ನು ನಿಖರವಾಗಿ ನಡೆಸಲು ಬಳಸಲಾಗಿತ್ತು.
ಆದರೆ ಮೆಟಾ ಪಾವತಿಸಲು ಒಪ್ಪಿರುವ ಪ್ರೈವೆಸಿ ಸೆಟ್ಲ್‌ಮೆಂಟ್ ಮೊತ್ತದಲ್ಲಿ ಪ್ರತಿ ಬಳಕೆದಾರರಿಗೆ ಎಷ್ಟು ದೊರೆಯಬಹುದೆಂಬ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ಕ್ಲೇಮ್ ಮಾಡಿದವರ ಸಂಖ್ಯೆ ಅಧಿಕವಾದಷ್ಟು ದೊರೆಯುವ ಮೊತ್ತ ಕಡಿಮೆಯಾಗಲಿದೆ.
ಫೇಸ್ಬುಕ್ ಸಂಸ್ಥೆಗೆ ದಂಡವನ್ನು ಐಯರ್ಲ್ಯಾಂಡ್‌ನ ಡೇಟಾ ಪ್ರೊಟೆಕ್ಷನ್ ಕಮಿಷನ್ ವಿಧಿಸಿತ್ತು. ಆಸ್ಟ್ರಿಯಾದ ಪ್ರೈವೆಸಿ ಹೋರಾಟಗಾರ ಮ್ಯಾಕ್ಸ್ ಸ್ಚರ್ಮ್ಸ್ ಅವರು ಈ ಕಾನೂನು ಹೋರಾಟ ನಡೆಸಿದ್ದರು.