ಪುದಿನಾ ಶಕ್ತಿ: ಉಬ್ಬರ ನಿವಾರಣೆಯಿಂದ ತಲೆನೋವು ಶಮನದ ವರೆಗೆ..

Update: 2023-08-02 16:03 GMT

ಸಾಂದರ್ಭಿಕ ಚಿತ್ರ.

ಪೆಪ್ಪರ್‍ಮಿಂಟ್ ಪ್ರಿಯರಿಗೆ ಸಿಹಿ ಸುದ್ದಿ. ಪುದಿನಾ ನೀಡುವ ಲಾಭಗಳನ್ನು ಕೇಳಿದರೆ ನೀವು ಅಚ್ಚರಿ ಪಡಬಹುದು.

ಮೊದಲನೆಯದಾಗಿ ಇದು ಜೀರ್ಣಕ್ರಿಯೆಯ ಚಾಂಪಿಯನ್. ಇದು ಹೊಟ್ಟೆ ಉಬ್ಬರಿಸುವ ಸಮಸ್ಯೆಯನ್ನು ನಿವಾರಿಸಬಲ್ಲದು. ಎರಡನೆಯದಾಗಿ ಮೆದುಳಿಗೂ ಇದು ಉತ್ತೇಜಕವಾಗಿ ಕೆಲಸ ಮಾಡುತ್ತದೆ ಹಾಗೂ ಗಮನ ಕೇಂದ್ರೀಕರಿಸಲು ಮತ್ತು ಜಾಗೃತಾವಸ್ಥೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದು ತಲೆನೋವು ಹಾಗೂ ಮೈಗ್ರೇನ್‍ನಂಥ ಸಮಸ್ಯೆಗೂ ಪರಿಹಾರ ನೀಡಬಹುದು ಎನ್ನುವ ಮಹತ್ವದ ಅಂಶವನ್ನೂ ಗಮನಿಸಬೇಕು. ಇದು ನಿಮ್ಮ ಉಸಿರಾಟಕ್ಕೂ ತಾಜಾತನ ತರಬಲ್ಲದು. ಇದರ ಘಮ ನಿಮಗೆ ಒತ್ತಡದಿಂದ ನಿರಾಳತೆ ನೀಡಲು ಕಾರಣವಾಗುತ್ತದೆ.

ಅಲರ್ಜಿಗಳು ಮತ್ತು ಸೈನಸ್ ಕಾರಣದಿಂದ ಉಂಟಾಗುವ ಮೂಗು ಕಟ್ಟುವಿಕೆಗೂ ಇದು ಪರಿಹಾರವಾಗಬಲ್ಲದು. ಇದು ಗಾಳಿಯ ಮಾರ್ಗವನ್ನು ತೆರೆಸುತ್ತದೆ ಹಾಗೂ ಶ್ಲೇಷ್ಮವನ್ನು ಸ್ವಚ್ಛಗೊಳಿಸಯುತ್ತದೆ. ಇದು ಬ್ಯಾಕ್ಟೀರಿಯಾ ಸೋಂಕು ತಡೆಯಲೂ ಸಹಕಾರಿ.

ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಗ್ಯಾಸ್ ಹಾಗೂ ಹೊಟ್ಟೆ ಉಬ್ಬರಿಸುವ ಸಮಸ್ಯೆಗೆ ರಾಮಬಾಣ. ಮಾನಸಿಕ ಸ್ಪಷ್ಟತೆ ಮತ್ತು ಗಮನ ಕೇಂದ್ರೀಕರಿಸಲು ಕೂಡಾ ಇದು ಸಹಕಾರಿಯಾಗಿದ್ದು, ನಿಮ್ಮ ನರಮಂಡಲವನ್ನು ತಣ್ಣಗಿಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಕೂಡಾ ನೆರವಾಗುತ್ತದೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News