ಹ್ಯಾಟ್ರಿಕ್ ಗೆಲುವಿನೊಂದಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಕೈವಶ ಮಾಡಿಕೊಂಡ ಭಾರತ

Update: 2024-02-26 08:34 GMT

Photo:X/BCCI

ರಾಂಚಿ: ಯುವ ಆಟಗಾರರಾದ ಶುಭಮನ್ ಗಿಲ್ ಹಾಗೂ ಧ್ರುವ್ ಜುರೇಲ್ ನಡುವಿನ ಮುರಿಯದ ಆರನೆ ವಿಕೆಟ್ ಜೊತೆಯಾಟದ ನೆರವಿನಿಂದ ಭಾರತ ತಂಡದ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ಮೂಲಕ ಭಾರತ ತಂಡವು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 3-1ರ ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 84 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ ತಂಡವು, ನಂತರ, 120 ರನ್ ಆಗುವುದರೊಳಗಾಗಿ ಐದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಶುಭಮನ್ ಗಿಲ್ ಜೊತೆಯಾದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್, ಮುರಿಯದ ಆರನೆಯ ವಿಕೆಟ್‌ಗೆ 72 ರನ್ ಜೊತೆಯಾಟ ಆಡುವ ಮೂಲಕ ಭಾರತದ ಗೆಲುವನ್ನು ಖಾತರಿಪಡಿಸಿದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್

ಮೊದಲ ಇನಿಂಗ್ಸ್: 353

ಎರಡನೆ ಇನಿಂಗ್ಸ್: 145

ಭಾರತ

ಮೊದಲ ಇನಿಂಗ್ಸ್: 307

ಎರಡನೆ ಇನಿಂಗ್ಸ್: 192/5

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News