ಇಂಗ್ಲೆಂಡ್ ಮತ್ತೆ ಬ್ಯಾಟಿಂಗ್ ವೈಫಲ್ಯ: 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟರ್ ಗಳ ಪೆವಿಲಿಯನ್ ಪರೇಡ್
Update: 2024-03-09 11:00 IST

Photo: X/BCCI
ಧರ್ಮಶಾಲಾ: 259 ರನ್ ಗಳ ಭಾರಿ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಇಳಿದಿರುವ ಆಂಗ್ಲರಿಗೆ ಆರ್. ಅಶ್ವಿನ್ ಆರಂಭಿಕ ಆಘಾತ ನೀಡಿದ್ದಾರೆ. ಇಂಗ್ಲೆಂಡ್ ತಂಡದ ಮೊತ್ತ 36 ರನ್ ಆಗುವುದರೊಳಗಾಗಿ ಮೂವರು ಪ್ರಮುಖ ಬ್ಯಾಟರ್ ಗಳನ್ನು ಅವರು ಪೆವಿಲಿಯನ್ ಗೆ ಕಳಿಸಿದ್ದಾರೆ.
ಇದಕ್ಕೂ ಮುನ್ನ, ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡವು, 477 ರನ್ ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಪರ ಐದು ವಿಕೆಟ್ ಗೊಂಚಲನ್ನು ಕಬಳಿಸಿದ ಶೋಹೆಬ್ ಬಶೀರ್ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.