210 ಕೆಜಿ ಭಾರ ಎತ್ತುವಾಗ ಬಾಡಿ ಬಿಲ್ಡರ್ ಜಸ್ಟಿನ್ ವಿಕ್ಕಿ ಮೃತ್ಯು

Update: 2023-07-22 09:29 GMT

ಜಸ್ಟಿನ್ ವಿಕ್ಕಿ (Photo credit: @justynvickybali_island/CEN)

@justynvickybali_island/CEN

@justynvickybali_island/CEN

ಬಾಲಿ: ಫಿಟ್ನೆಸ್ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದ ಬಾಡಿಬಿಲ್ಡರ್ ಜಸ್ಟಿನ್ ವಿಕ್ಕಿ ಜಿಮ್ ನಲ್ಲಿ 210 ಕೆಜಿ ಎತ್ತುವ ಪ್ರಯತ್ನದಲ್ಲಿದ್ದಾಗ ಸಾವನ್ನಪ್ಪಿದ್ದಾರೆ. ಜುಲೈ 15 ರಂದು ಅವರು ಬಾಲಿ ಜಿಮ್ ನಲ್ಲಿ ಶಕ್ತಿ ತರಬೇತಿ ಪಡೆಯುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ.

ಡೈಲಿ ಮೇಲ್ ಪ್ರಕಾರ, 33ರ ವಯಸ್ಸಿನ ವಿಕ್ಕಿ. ಶನಿವಾರ ಬಾಲಿಯ ಸಾನೂರ್ ನಲ್ಲಿರುವ ಪ್ಯಾರಡೈಸ್ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಅವರು 250 ಕೆಜಿ ಭಾರವನ್ನು ಕುಳಿತು ಭುಜಬಲದಿಂದ ಮೇಲಕ್ಕೆ ಎತ್ತುವ ಪ್ರಯತ್ನದಲ್ಲಿದ್ದಾಗ ಅವರು ಲಿಫ್ಟ್ ಅನ್ನು ಪೂರ್ಣಗೊಳಿಸಲು ವಿಫಲರಾದರು. ಆಗ ಮುಂದಕ್ಕೆ ಬಿದ್ದ ವಿಕ್ಕಿ ಅವರ ಕತ್ತಿನ ಹಿಂಭಾಗಕ್ಕೆ ಜೋಡಿಸಲಾದ ತೂಕವು ಅಪ್ಪಳಿಸಿದ ಪರಿಣಾಮ ಕುತ್ತಿಗೆ ಮುರಿದುಹೋಗಿದೆ. ವಿಕ್ಕಿ ನೆಲಕ್ಕೆ ಬಿದ್ದಾಗ ಅವರ ಹಿಂದೆ ನಿಂತಿದ್ದ ಓರ್ವ ಸ್ಪಾಟರ್ ಅಸಹಾಯಕನಾಗಿದ್ದನು.

ಜಿಮ್ ಅಪಘಾತದ ನಂತರ ವಿಕ್ಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು  ಕುತ್ತಿಗೆ ಮುರಿದು ಹೋಗಿದ್ದ ಪರಿಣಾಮ ಸಾವನ್ನಪ್ಪಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News