ಚಾಂಪಿಯನ್ಸ್ ಟ್ರೋಫಿ | ಆಸ್ಟ್ರೇಲಿಯಾ 25 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 125 ರನ್

Update: 2025-03-04 16:19 IST
ಚಾಂಪಿಯನ್ಸ್ ಟ್ರೋಫಿ | ಆಸ್ಟ್ರೇಲಿಯಾ 25 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 125 ರನ್

PC | @BCCi

  • whatsapp icon

ದುಬೈ : ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ- ಆಸ್ಟ್ರೇಲಿಯಾದ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 25 ಓವರ್ ಗಳಲ್ಲಿ 125 ರನ್ ಗಳಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ಕೂಪರ್ ಕೊನೊಲಿ ಶೂನ್ಯದಲ್ಲಿ ಔಟಾದರೆ, ಟ್ರಾವಿಸ್ ಹೆಡ್ 33 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್ ನೆರವಿನೊಂದಿಗೆ 39 ರನ್ ಗಳಿಸಿ ಔಟಾದರು.

ನಂತರ ಕ್ರಮಾಂಕದಲ್ಲಿ ಬಂದ ಮಾರ್ನಸ್ ಲ್ಯಾಬುಶೇನ್ 36 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 29 ರನ್ ಗಳಿಸಿ ಔಟಾದರು.

ತಂಡದ ನಾಯಕ ಸ್ಟೀವ್ ಸ್ಮಿತ್ 64 ಎಸೆತಗಳಲ್ಲಿ 3 ಬೌಂಡರಿ ನೆರವಿನೊಂದಿಗೆ 44 ರನ್ ಗಳಿಸಿದರೆ, ಅವರಿಗೆ ಜೊತೆಯಾದ ಜೋಶ್ ಇಂಗ್ಲಿಸ್ 8 ಎಸೆತಗಳಲ್ಲಿ7 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಆಸ್ಟ್ರೇಲಿಯಾ ತಂಡವು 25 ಓವರ್ ಗಳಲ್ಲಿ 125  ರನ್ ಗಳಿಸಿದೆ. ಭಾರತದ ಪರ ಮುಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News