ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಚೀನಾ | ಪದಕ ಬೇಟೆ ಆರಂಭ

Update: 2024-07-27 12:45 GMT

Photo : Rueters

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚೀನಾವು ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದು, ಮೊದಲ ಚಿನ್ನ ಗೆದ್ದ ಸಾಧನೆ ಮಾಡಿದೆ.

ಶೂಟಿಂಗ್‌‌ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚೀನಾದ ಸ್ಪರ್ಧಿಗಳು ಈ ಸಾಧನೆ ಮಾಡಿದ್ದಾರೆ.

ಚೀನಾದ ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಜೋಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದೆ. ಫೈನಲ್‌ನಲ್ಲಿ 16-12ರ ಅಂತರದಲ್ಲಿ ಚೀನಾದ ಜೋಡಿಯು ಕೊರಿಯಾ ವಿರುದ್ಧ ಜಯ ಸಾಧಿಸಿದೆ.

ಈ ವಿಭಾಗದಲ್ಲಿ ಕೊರಿಯಾದ ಕೆಯುಮ್ ಜಿ-ಹೈಯಾನ್ ಮತ್ತು ಪಾರ್ಕ್ ಹಾ-ಜುನ್ ಜೋಡಿ ಬೆಳ್ಳಿ, ಕಝಕಿಸ್ತಾನದ ಅಲೆಕ್ಸಾಂಡ್ರಾ ಲೆ ಮತ್ತು ಇಸ್ಲಾಂ ಸತ್ಪಯೇವ್ ಜೋಡಿಯು ಕಂಚಿನ ಪದಕ ತಮ್ಮದಾಗಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News