ಡೇವಿಸ್ ಕಪ್‌ನಲ್ಲಿ ಭಾರತದ ಭರವಸೆಯ ಶ್ರೀರಾಮ್ ಬಾಲಾಜಿ

Update: 2024-09-15 02:13 GMT
ಶ್ರೀರಾಮ್‌ ಬಾಲಾಜಿ | PHOTO : ATP

ಹೊಸದಿಲ್ಲಿ: ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಎರಡು ದಿನಗಳ ಸ್ವೀಡನ್ ವಿರುದ್ಧದ ಡೇವಿಡ್ ಕಪ್ ವಿಶ್ವ ಗ್ರೂಪ್ ವನ್ ಪಂದ್ಯಗಳಲ್ಲಿ ಭಾರತದ ಶ್ರೀರಾಮ್ ಬಾಲಾಜಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಪಂದ್ಯಗಳು ಶನಿವಾರ ಆರಂಭಗೊಂಡಿದ್ದು, ರವಿವಾರ ಮುಕ್ತಾಯಗೊಳ್ಳಲಿದೆ.

ತಮಿಳುನಾಡಿನ ಬಾಲಾಜಿ ಮತ್ತು ಅದೇ ರಾಜ್ಯದವರಾದ ರಾಮ್‌ಕುಮಾರ್ ರಾಮನಾಥನ್ ರವಿವಾರ ಡಬಲ್ಸ್‌ನಲ್ಲಿ ಆ್ಯಂಡ್ರಿ ಗೊರಾಸ್ನಸನ್ ಮತ್ತು ಫಿಪಿಪ್ ಬರ್ಗೆವಿ ಅವರನ್ನು ಎದುರಿಸಲಿದ್ದಾರೆ.

ಹಿಂದಿನ ಡೇವಿಸ್ ಕಪ್ ಪಂದ್ಯಗಳಲ್ಲಿ, ಈ ವರ್ಷದ ಆದಿ ಭಾಗದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಸಿಂಗಲ್ಸ್‌ನಲ್ಲಿ ಪಾಕಿಸ್ತಾನದ ಅಕೀಲ್ ಖಾನ್‌ರನ್ನು ಬಾಲಾಜಿ ಸೋಲಿಸಿದ್ದರು.

ಇತ್ತೀಚಿನ ದಿನಗಳಲ್ಲಿ, ಅವರ ನಿರ್ವಹಣೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆಯಾದರೂ, ಅವರು ಉನ್ನತ ಮಟ್ಟದಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ.

‘‘ಈ ವರ್ಷ ನಾನು ಎಲ್ಲಾ ಗ್ರ್ಯಾನ್ ಸ್ಲಾಮ್‌ಗಳಲ್ಲಿ ಆಡಿದ್ದೇನೆ. ನಾನು ನನ್ನ ಶ್ರೇಷ್ಠ ಟೆನಿಸನ್ನು ಆಡುತ್ತಿದ್ದೇನೆ. ದೇಶಕ್ಕಾಗಿ ಆಡುವುದು ಯಾವತ್ತೂ ವಿಶೇಷವೇ. ನಾನು ಸಿಂಗಲ್ಸ್ ಪಂದ್ಯಗಳ ಅಭ್ಯಾಸ ಮಾಡುತ್ತಿದ್ದೇನೆ. ಇಲ್ಲಿಗೆ ಬಂದ ಬಳಿಕ ನಾನು ತುಂಬಾ ಅಭ್ಯಾಸ ಪಂದ್ಯಗಳನ್ನು ಆಡಿದ್ದೇನೆ’’ ಎಂದು ಬಾಲಾಜಿ ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News