ಇಂಗ್ಲೆಂಡ್ ವಿರುದ್ಧ ಗೆಲುವು: ಭಾರತಕ್ಕೆ ಟಿ20 ಸರಣಿ

Update: 2025-02-01 08:01 IST
ಇಂಗ್ಲೆಂಡ್ ವಿರುದ್ಧ ಗೆಲುವು: ಭಾರತಕ್ಕೆ ಟಿ20 ಸರಣಿ

PC : PTI 

  • whatsapp icon

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು 15 ರನ್ಗಳ ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ಗಳನ್ನು ಕಲೆ ಹಾಕಿತು. ಆರಂಭದಲ್ಲೇ ಭಾರತ ಆಘಾತ ಅನುಭವಿಸಿ ಅಗ್ರ ಕ್ರಮಾಂಕದ ಆಟಗಾರರಾದ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಮೊತ್ತ 12 ರನ್ಗಳಾದಾಗ ಔಟ್ ಆದರು. ಅಭಿಷೇಕ್ ವರ್ಮಾ (19 ಎಸೆತಗಳಲ್ಲಿ 29) ಮತ್ತು ರಿಂಕು ಸಿಂಗ್ (30) ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ರಿಂಕು ಸಿಂಗ್ ಅವರನ್ನು ಬ್ರಿಂಡನ್ ಕ್ರೇಸ್ ಔಟ್ ಮಾಡಿದಾಗ ಭಾರತ 5 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತ್ತು.

ಈ ಹಂತದಲ್ಲಿ ಶಿವಂ ದುಬೆ (34 ಎಸೆತಗಳಲ್ಲಿ 53) ಮತ್ತು ಹಾರ್ದಿಕ್ ಪಾಂಡ್ಯ (30 ಎಸೆತಗಳಲ್ಲಿ 53) ಭಾರತದ ಪಾಲಿಗೆ ಆಪದ್ಭಾಂಧವರಾದರು. ಆರನೇ ವಿಕೆಟ್ಗೆ ಈ ಜೋಡಿ 87 ರನ್ ಸೇರಿಸಿತು. ಆರಂಭಿಕ ಆಘಾತದ ನಡುವೆಯೂ ಭಾರತ 181 ರನ್ಗಳ ಗೌರವಾರ್ಹ ಮೊತ್ತ ಕಲೆ ಹಾಕಿತು.

ಫಿಲಿಪ್ ಸಾಲ್ಟ್ (23) ಮತ್ತು ಬೆನ್ ಡಕೆಟ್ (19 ಎಸೆತದಲ್ಲಿ 39) ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 62 ರನ್ಗಳ ಭದ್ರ ಬುನಾದಿ ಒದಗಿಸಿತು. ಆದರೆ ಭಾರತಸ ಸ್ಪಿನ್ನರ್ಗಳು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಸಿಂಹಸ್ವಪ್ನವಾಗಿ ಕಾಡಿದರು. ಹ್ಯಾರಿ ಬ್ರೂಕ್ (26 ಎಸೆತಗಳಲ್ಲಿ 51) ಹೊರತುಪಡಿಸಿದರೆ, ಉಳಿದ ಎಲ್ಲ ಆಟಗಾರರು ಸ್ಪಿನ್ ಎದುರಿಸುವಲ್ಲಿ ಎಡವಿ ವಿಕೆಟ್ ಒಪ್ಪಿಸಿ 19.4 ಓವರ್ಗಳಲ್ಲಿ 166 ರನ್ಗಳಿಗೆ ತಂಡ ಆಲೌಟ್ ಆಯಿತು. ರವಿ ಬಿಷ್ಣೋಯಿ ಮತ್ತು ಹರ್ಷಿತ್ ರಾಣಾ ತಲಾ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸರಣಿಯ ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News