ಭಾರತದ ಬೌಲರ್‌ಗಳಿಗೆ 'ಹೆಡ್' ಏಕ್!
Update: 2024-12-15 06:20 GMT
ಬ್ರಿಸ್ಬೇನ್: ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಮೂರನೆ ಟೆಸ್ಟ್ ಪಂದ್ಯದಲ್ಲೂ ಭಾರತೀಯ ಬೌಲರ್‌ಗಳ ಪಾಲಿಗೆ ಟ್ರಾವಿಸ್ ಹೆಡ್ ತಲೆನೋವಾದರು. ಮತ್ತೊಂಡು ಕಡೆ ಸ್ಟೀವ್ ಸ್ಮಿತ್ ಕೂಡಾ ಶತಕ ಬಾರಿಸಿದ್ದಾರೆ.
ಇತ್ತೀಚಿನ ವರದಿ ಪ್ರಕಾರ 153 ಬಾಲ್‌ಗಳಲ್ಲಿ ಅಜೇಯ 146 ರನ್ ಗಳಿಸಿರುವ ಟ್ರಾವಿಸ್ ಹೆಡ್, 100 ರನ್ ಗಳಿಸಿರುವ ಸ್ಟೀವ್ ಸ್ಮಿತ್ ರೊಂದಿಗೆ ಮುರಿಯದ ನಾಲ್ಕನೆ ವಿಕೆಟ್ ಜೊತೆಯಾಟದಲ್ಲಿ 238 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದ್ದಾರೆ.
ಆಸ್ಟ್ರೇಲಿಯ 3 ವಿಕೆಟ್ ಕಳೆದುಕೊಂಡು 313 ರನ್ ಗಳಿಸಿದೆ.
ಭಾರತದ ಪರ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ ಜಸ್‌ಪ್ರೀತ್ ಬೂಮ್ರಾ ಎರಡು ಪ್ರಮುಖ ವಿಕೆಟ್‌ಗಳನ್ನು ಕಿತ್ತರು. ಮತ್ತೊಂದು ವಿಕೆಟ್ ಅನ್ನು ನಿತೀಶ್ ಕುಮಾರ್ ರೆಡ್ಡಿ ತಮ್ಮ ಖಾತೆಗೆ ಜಮಾ ಮಾಡಿಕೊಂಡರು.