ಐಸಿಸಿ ಟಿ20 ರ‍್ಯಾಂಕಿಂಗ್ | ಆಲ್‌ರೌಂಡರ್ಸ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಪಾಂಡ್ಯ

Update: 2024-10-09 17:29 GMT

PC : PTI ಹಾರ್ದಿಕ್ ಪಾಂಡ್ಯ

ದುಬೈ : ಇತ್ತೀಚಿನ ಐಸಿಸಿ ಪುರುಷರ ಅಂತರ್‌ರಾಷ್ಟ್ರೀಯ ಟಿ20 ರ‍್ಯಾಂಕಿಂಗ್‌ನಲ್ಲಿ, ಮೂವರು ಭಾರತೀಯ ಆಟಗಾರರು ಗಮನಾರ್ಹ ಸಾಧನೆಗೈದಿದ್ದಾರೆ.

ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿನ ಅವರ ನಿರ್ವಹಣೆಯು ನೂತನ ರ್ಯಾಂ ಕಿಂಗ್‌ನಲ್ಲಿ ಪ್ರತಿಫಲಿಸಿದೆ. ಗ್ವಾಲಿಯರ್‌ನಲ್ಲಿ ನಡೆದ ಈ ಪಂದ್ಯವನ್ನು ಭಾರತ 49 ರನ್‌ಗಳ ಅಂತರದಿಂದ ಗೆದ್ದಿದೆ. ಅರ್ಶದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ತಮ್ಮ ನಡುವೆ ಆರು ವಿಕೆಟ್‌ಗಳನ್ನು ಹಂಚಿಕೊಂಡಿದ್ದರು. ಆಲೌರೌಂಡರ್ ಹಾರ್ದಿಕ್ ಪಾಂಡ್ಯ 39 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ, ಪಾಂಡ್ಯ ಏಳು ಸ್ಥಾನ ಮೇಲಕ್ಕೆ ಜಿಗಿದು 60ನೇ ಸ್ಥಾನ ಗಳಿಸಿದ್ದಾರೆ. ಆಲ್‌ರೌಂಡ್ ಪಟ್ಟಿಯಲ್ಲೂ ಪಾಂಡ್ಯ ನಾಲ್ಕು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನದಲ್ಲಿ ನೆಲೆಸಿದ್ದಾರೆ.

ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ, ಅರ್ಶದೀಪ್ ಸಿಂಗ್ 8 ಸ್ಥಾನ ಜಿಗಿದು 8ನೇ ಸ್ಥಾನ ಗಳಿಸಿದ್ದಾರೆ. ಇದು ಅವರ ಕ್ರೀಡಾ ಬದುಕಿನ ಗರಿಷ್ಠ ಸ್ಥಾನವಾಗಿದೆ.

ಅದೇ ವೇಳೆ, ಬೌಲಿಂಗ್ ವಿಭಾಗದಲ್ಲಿ, ವಾಶಿಂಗ್ಟನ್ ಸುಂದರ್ ನಾಲ್ಕು ಸ್ಥಾನ ಮೇಲಕ್ಕೆ ಸರಿದು 35ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಆದಿಲ್ ರಶೀದ್ ಅಗ್ರ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News