ಸ್ಯಾಫ್ ಕಪ್: ಭಾರತ ಫೈನಲ್'ಗೆ; ಪೆನಾಲ್ಟಿ ಶೂಟೌಟ್ ನಲ್ಲಿ ಲೆಬನಾನ್ ಔಟ್
ಹೊಸದಿಲ್ಲಿ: ಪೆನಾಲ್ಟಿ ಶೂಟೌಟ್ ನಲ್ಲಿ ಲೆಬನಾನ್ ತಂಡವನ್ನು 4-2 ಅಂತರದಿಂದ ರೋಚಕವಾಗಿ ಮಣಿಸಿದ ಹಾಲಿ ಚಾಂಪಿಯನ್ ಭಾರತ ತಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೆ ಪ್ರವೇಶಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು 120 ನಿಮಿಷಗಳ ಆಟದಲ್ಲಿ ಗೋಲುರಹಿತ ಡ್ರಾಗೊಳಿಸಿದವು. ಆಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ರೋಚಕ ಜಯ ದಾಖಲಿಸಿರುವ ಭಾರತವು ಜುಲೈ 4ರಂದು ನಿಗದಿಯಾಗಿರುವ ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಪ್ರಾದೇಶಿಕ ಟೂರ್ನಮೆಂಟ್ನಲ್ಲಿ ಭಾರತವು 13ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. ಸತತ 9ನೇ ಬಾರಿ ಫೈನಲ್ಗೆ ತಲುಪಿ ಮಹತ್ವದ ಸಾಧನೆ ಮಾಡಿದೆ. ಚಾಂಪಿಯನ್ಶಿಪ್ನ ಇತಿಹಾಸದಲ್ಲಿ ಭಾರತವು ಹಿಂದಿನ 13 ಆವೃತ್ತಿಗಳಲ್ಲಿ 8 ಬಾರಿ ಟ್ರೋಫಿ ಜಯಿಸಿದೆ. 2003ರಲ್ಲಿ ಮಾತ್ರ ಭಾರತವು ಅಗ್ರ-2ರಲ್ಲಿ ಸ್ಥಾನ ಪಡೆಯಲು ವಿಫಲವಾಗಿತ್ತು.
ಪೆನಾಲ್ಟಿ ಶೂಟೌಟ್ ನಲ್ಲಿ ನಾಯಕ ಸುನೀಲ್ ಚೆಟ್ರಿ, ಅನ್ವರ್ ಅಲಿ, ಮಹೇಶ್ ಸಿಂಗ್ ಹಾಗೂ ಉದಾಂತ ಸಿಂಗ್ ಗೋಲು ಗಳಿಸಿದರು.