ಏಶ್ಯದಲ್ಲಿ ಗರಿಷ್ಠ ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ಬೌಲರ್

Update: 2024-09-27 16:09 GMT

ಅನಿಲ್ ಕುಂಬ್ಳೆ , ಆರ್.ಅಶ್ವಿನ್ | PTI

ಕಾನ್ಪುರ : ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇದೀಗ ಏಶ್ಯದಲ್ಲಿ ನಡೆದಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಸ್ಪಿನ್ ಗಾರೂಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ನಜ್ಮುಲ್ ಹುಸೈನ್ ಶಾಂಟೊ ವಿಕೆಟನ್ನು ಕಬಳಿಸಿರುವ ಅಶ್ವಿನ್ ಅವರು ಏಶ್ಯದಲ್ಲಿ ಒಟ್ಟು 420ನೇ ವಿಕೆಟ್ ಪಡೆದರು. ಈ ಸಾಧನೆಯ ಮೂಲಕ ಅನಿಲ್ ಕುಂಬ್ಳೆ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಕುಂಬ್ಳೆ ಏಶ್ಯಖಂಡದಲ್ಲಿ ಒಟ್ಟು 419 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 102 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 523 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಶ್ಯದಲ್ಲಿ ಅಶ್ವಿನ್ ಅವರ ಪ್ರದರ್ಶನ ಗಮನಾರ್ಹವಾಗಿದೆ. 420 ವಿಕೆಟ್‌ಗಳನ್ನು ತಲುಪುವ ಮೂಲಕ ಏಶ್ಯದಲ್ಲಿ 400ಕ್ಕೂ ಅಧಿಕ ವಿಕೆಟ್ ಪಡೆದ ಬೌಲರ್‌ಗಳ ವಿಶೇಷ ಕ್ಲಬ್‌ಗೆ ಸೇರಿದ್ದಾರೆ.

ಶ್ರೀಲಂಕಾದ ಲೆಜೆಂಡರಿ ಬೌಲರ್ ಮುತ್ತಯ್ಯ ಮುರಳೀಧರನ್ ಏಶ್ಯದಲ್ಲಿ ಗರಿಷ್ಠ ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ದಾಖಲೆ ಹೊಂದಿದ್ದಾರೆ. ಒಟ್ಟು 800 ವಿಕೆಟ್‌ಗಳನ್ನು ಪಡೆದಿರುವ ಮುರಳೀಧರನ್, ಏಶ್ಯವೊಂದರಲ್ಲೇ 612 ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ಮೈಲಿಗಲ್ಲು ತಲುಪುವ ಮೂಲಕ ಅಶ್ವಿನ್ ಅವರು ತವರು ನೆಲ ಹಾಗೂ ಏಶ್ಯದ ಇತರ ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಸ್ಥಿರತೆ ಹಾಗೂ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ.

ಏಶ್ಯದಲ್ಲಿ ಗರಿಷ್ಠ ಟೆಸ್ಟ್ ವಿಕೆಟ್‌ಗಳನ್ನು ಪಡೆದವರು

612-ಎಂ.ಮುರಳೀಧರನ್

420-ರವಿಚಂದ್ರನ್ ಅಶ್ವಿನ್

419-ಅನಿಲ್ ಕುಂಬ್ಳೆ

354-ರಂಗನ ಹೆರಾತ್

300-ಹರ್ಭಜನ್ ಸಿಂಗ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News