2023ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಮೂರು ಶತಕದಂಚಿನಲ್ಲಿ ಎಡವಿದ್ದ ಕೊಹ್ಲಿ

Update: 2023-11-05 15:28 GMT

PHOTO : cricketworldcup.com

ಕೋಲ್ಕತಾ: ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ 2023 ಟೂರ್ನಿಯಲ್ಲಿ ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಮೂರು ಶತಕದ ಅವಕಾಶವನ್ನು ಅಂಚಿನಲ್ಲಿ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ, ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಭಾರತ ಪಂದ್ಯದ ವೇಳೆ ಕೊಹ್ಲಿ ತಮ್ಮ 49ನೇ ಏಕದಿನ ಶತಕವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು.

ಮುಂಬೈನ ವಾಂಖೆಡೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಹಾಜರಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 88 ರನ್ ಗಳಿಸಿ ದಿಲ್ಶಾನ್‌ ಮದುಶಂಕ ಬೌಲಿಂಗ್ ನಲ್ಲಿ ಔಟ್‌ ಆಗಿ, ಶತಕಕ್ಕೋಸ್ಕರ ಬಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಗೆ ಮೂಡಿಸಿದ್ದರು.

ಅದಕ್ಕೂ ಮುನ್ನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ನಾಲ್ಕು ವಿಕೆಟ್ ಗಳ ಜಯ ಸಾಧಿಸಿದ್ದ ಪಂದ್ಯದಲ್ಲಿ, 104 ಎಸೆತಗಳಲ್ಲಿ 95 ರನ್‌ ಬಾರಿಸಿದ್ದ ವಿರಾಟ್ ಕೊಹ್ಲಿ ಮ್ಯಾಟ್‌ ಹೆನ್ರಿ ಗೆ ವಿಕೆಟ್‌ ಒಪ್ಪಿಸಿದ್ದರು.

ಟೂರ್ನಿಯಲ್ಲಿ ಅಸೀಸ್‌ ವಿರುದ್ದದ ಮೊದಲ ಪಂದ್ಯದಲ್ಲಿ ಬ್ಯಾಟ್‌ ಬೀಸಿದ್ದ ಕೊಹ್ಲಿ 85 ರನ್‌ ಗೆ ಜೋಸ್‌ ಹೇಝಲ್‌ ವುಡ್‌ ಬೌಲಿಂಗ್ ನಲ್ಲಿ ಲಾಬುಶೇನ್‌ ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ರವಿವಾರ ದಕ್ಷಿಣ ಆಫ್ರಿಕಾ ವಿರುದ್ದ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ವಿರಾಟ್‌ 10 ಬೌಂಡರಿ ಸಹಿತ 101 ಅಜೇಯ ರನ್‌ ಬಾರಿಸಿ ಸಚಿನ್ ಏಕದಿನ ಅತಿ ಹೆಚ್ಚು ಶತಕದ ದಾಖಲೆ ಮುರಿದರು. ಕೊಹ್ಲಿ 49ನೇ ಶತಕ ಬಾರಿಸಲು 288 ಇನ್ನಿಂಗ್ಸ್ ತೆಗೆದುಕೊಂಡರೆ, ಸಚಿನ್ 452 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News