ನೆಲಬಾಂಬ್ ಸ್ಫೋಟದಲ್ಲಿ ಉಳಿದುಕೊಂಡ ಹಕಾಟೊ ಸೆಮಾಗೆ ಪ್ಯಾರಾಲಿಂಪಿಕ್ಸ್ ಕಂಚು

Update: 2024-09-07 02:47 GMT

PC: x.com/TheKhelIndia

ಹೊಸದಿಲ್ಲಿ: ನೆಲಬಾಂಬ್ ಸ್ಫೋಟದಲ್ಲಿ ಉಳಿದುಕೊಂಡ ಭಾರತದ ಹಕಾಟೊ ಸೆಮಾ ಪ್ಯಾರಾಲಿಂಪಿಕ್ಸ್ ಎಫ್57 ವರ್ಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಶುಕ್ರವಾರ ಜೀವನಶ್ರೇಷ್ಠ ಸಾಧನೆ ಎನಿಸಿದ 14.65 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆಯುವ ಮೂಲಕ ಕಂಚಿನ ಪದಕ ಗೆದ್ದರು.

ಧಿಮಾಪುರದ 40 ವರ್ಷ ವಯಸ್ಸಿನ ಪ್ಯಾರಾ ಅಥ್ಲೀಟ್, ಹಂಗ್ಝೋಹುವಿನಲ್ಲಿ ಕಳೆದ ವರ್ಷ ನಡೆದ ಪ್ಯಾರಾ ಗೇಮ್ಸ್ ನಲ್ಲೂ ಕಂಚಿನ ಪದಕ ಗೆದ್ದಿದ್ದರು. ಕೇವಲ 13.88 ಮೀಟರ್ ನೊಂದಿಗೆ ಇಂದಿನ ಸ್ಪರ್ಧೆ ಆರಂಭಿಸಿದ ಸೆಮಾ, ತಕ್ಷಣವೇ ಲಯ ಕಳೆದುಕೊಂಡು ಎರಡನೇ ಪ್ರಯತ್ನದಲ್ಲಿ 14 ಮೀಟರ್ ಗೆರೆ ದಾಟಿದರು. ಮುಂದಿನ ಎಸೆತದಲ್ಲಿ 14.40 ಮೀಟರ್ ಗಳ ಸಾಧನೆ ಮಾಡಿದರು.

ನಾಲ್ಕನೇ ಪ್ರಯತ್ನದಲ್ಲಿ ಅತ್ಯುತ್ತಮ ಸಾಧನೆ ತೋರಿ ವೈಯಕ್ತಿಕ ಉತ್ತಮ ಸಾಧನೆ ಎನಿಸಿದ್ದ 14.49 ಮೀಟರ್ ದೂರದ ಗಡಿ ದಾಟಿ ಕಂಚಿನ ಸಾಧನೆ ಮಾಡಿದರು. ಭಾರತದ ಮತ್ತೊಬ್ಬ ಸ್ಪರ್ಧಿ ಮತ್ತು ಕಳೆದ ಕೂಟದ ಬೆಳ್ಳಿಪದಕ ವಿಜೇತ ಸೋಮನ್ ರಾಣಾ 14.07 ಮೀಟರ್ ನೊಂದಿಗೆ ಐದನೇ ಸ್ಥಾನ ಪಡೆದರು.

ಕಾಲಿನಲ್ಲಿ ಕಡಿಮೆ ಪ್ರಮಾಣದ ಚಲನೆ ವೈಕಲ್ಯವನ್ನು ಹೊಂದಿದ, ಪಾದದಲ್ಲಿ ಸಾಮಾನ್ಯ ಪ್ರಮಾಣದ ಅಂಗವೈಕಲ್ಯ ಹೊಂದಿದ ಅಥವಾ ಮೊಣಕಾಲುಗಳಿಲ್ಲದ ಅಥ್ಲೀಟ್ ಗಳಿಗಾಗಿ ಎಫ್57 ವರ್ಗವನ್ನು ಸೃಷ್ಟಿಸಲಾಗಿದೆ. ಈ ಅಥ್ಲೀಟ್ ಗಳು ಕಾಲಿನ ಬಲ ಇಲ್ಲದೆಯೂ ದೇಹದ ಮೇಲ್ಭಾಗದ ಶಕ್ತಿಯಿಂದಲೇ ತಮ್ಮ ಸಾಮರ್ಥ್ಯವನ್ನು ತೋರಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News