ಎಂ.ಎಸ್. ಧೋನಿ ದಾಖಲೆ ಸರಿಗಟ್ಟಿದ ಪಂತ್

Update: 2024-09-21 15:14 GMT

ರಿಷಭ್ ಪಂತ್ , ಎಂ.ಎಸ್. ಧೋನಿ |  PTI 

ಚೆನ್ನೈ : ಬಾಂಗ್ಲಾದೇಶ ವಿರುದ್ದ ಶನಿವಾರ ನಡೆದ ಮೊದಲ ಟೆಸ್ಟ್‌ ನ 3ನೇ ದಿನದಾಟದಲ್ಲಿ ತನ್ನ ಆರನೇ ಶತಕವನ್ನು ಸಿಡಿಸಿದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳನ್ನು ಗಳಿಸಿರುವ ಭಾರತೀಯ ವಿಕೆಟ್‌ ಕೀಪರ್ ಎಂ.ಎಸ್. ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು.

ಪಂತ್ 124 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ ಶತಕ ಪೂರೈಸಿದರು. 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಸುಮಾರು ಎರಡು ವರ್ಷಗಳ ನಂತರ ಟೆಸ್ಟ್ ಕ್ರಿಕೆಟಿಗೆ ಪುನರಾಗಮನಗೈದಿರುವ ಪಂತ್ ಅವರ ಈ ಸಾಧನೆ ಗಮನಾರ್ಹವಾಗಿದೆ.

ಈ ವರ್ಷಾರಂಭದಲ್ಲಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಪಂತ್ ಅವರು ವೃತ್ತಿಪರ ಕ್ರಿಕೆಟ್‌ಗೆ ವಾಪಸಾಗಿದ್ದರು. ಆ ನಂತರ ಭಾರತದ ಟಿ-20 ವಿಶ್ವಕಪ್ ವಿಜೇತ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಮೊದಲು ಪಂತ್ ಅವರು ದುಲೀಪ್ ಟ್ರೋಫಿಯಲ್ಲಿ ಆಡುವ ಮೂಲಕ ಕೆಂಪು ಚೆಂಡಿನ ಕ್ರಿಕೆಟ್‌ಗೆ ಮರಳಿದ್ದರು.

►ಟೆಸ್ಟ್‌ ನಲ್ಲಿ ಗರಿಷ್ಠ ಶತಕ ಗಳಿಸಿದ ಭಾರತೀಯ ವಿಕೆಟ್‌ ಕೀಪರ್‌ಗಳು

ರಿಷಭ್ ಪಂತ್-6

ಎಂ.ಎಸ್. ಧೋನಿ-6

ವೃದ್ದಿಮಾನ್ ಸಹಾ-3

► ಟೆಸ್ಟ್‌ ನಲ್ಲಿ ಗರಿಷ್ಠ ಶತಕಗಳನ್ನು ಗಳಿಸಿರುವ ಕೀಪರ್‌ಗಳು

ಆಡಮ್ ಗಿಲ್‌ ಕ್ರಿಸ್ಟ್(ಆಸ್ಟ್ರೇಲಿಯ)-17

ಆ್ಯಂಡಿ ಫ್ಲವರ್(ಝಿಂಬಾಬ್ವೆ)-12

ಲೆಸ್ ಅಮೆಸ್(ಇಂಗ್ಲೆಂಡ್)-8

ಎಬಿ ಡಿವಿಲಿಯರ್ಸ್(ದ.ಆಫ್ರಿಕಾ)-7

ಎಂಜೆ ಪ್ರಿಯರ್(ಇಂಗ್ಲೆಂಡ್)-7

ಕುಮಾರ ಸಂಗಕ್ಕರ(ಶ್ರೀಲಂಕಾ)-7

ಬಿಜೆ ವಾಟ್ಲಿಂಗ್(ಇಂಗ್ಲೆಂಡ್)-7

ಕ್ವಿಂಟನ್ ಡಿಕಾಕ್(ದ.ಆಫ್ರಿಕಾ)-6

ಎಂ.ಎಸ್. ಧೋನಿ(ಭಾರತ)-6

ಕಾಮ್ರಾನ್ ಅಕ್ಮಲ್(ಪಾಕಿಸ್ತಾನ)-6

ಮುಶ್ಫಿಕುರ್ರ್ಹೀಂ(ಬಾಂಗ್ಲಾದೇಶ)-6

ಸ್ಟಿವರ್ಟ್(ಇಂಗ್ಲೆಂಡ್)-6

ರಿಷಭ್ ಪಂತ್(ಭಾರತ)-6

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News