ಪ್ಯಾರಿಸ್ ಪ್ಯಾರಾಲಿಂಪಿಕ್ಸ್| 100 ಮೀ. ಓಟ: ಸಿಮ್ರಾನ್ ಫೈನಲ್ ಗೆ ಅರ್ಹತೆ

Update: 2024-09-05 15:42 GMT

PC : X

ಪ್ಯಾರಿಸ್: ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಭಾರತೀಯ ಓಟಗಾರ್ತಿ ಸಿಮ್ರಾನ್ ಪ್ಯಾರಾಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಮಹಿಳೆಯರ 100 ಮೀ. ಓಟದ(ಟಿ12) ಸೆಮಿ ಫೈನಲ್ ರೇಸ್ ನಲ್ಲಿ 12.33 ಸೆಕೆಂಡ್ ನಲ್ಲಿ ಗುರಿ ತಲುಪಿದರು. ಈ ಮೂಲಕ ಫೈನಲ್ ನಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ.

ಅಭಯ್ ಸಿಂಗ್ ಅವರ ಮಾರ್ಗದರ್ಶನ ಪಡೆದಿರುವ ಹೊಸದಿಲ್ಲಿಯ 24ರ ಹರೆಯದ ಹಾಲಿ ವಿಶ್ವ ಚಾಂಪಿಯನ್ ಸಿಮ್ರಾನ್ ಅವರು ಸೆಮಿ ಫೈನಲ್-2ರಲ್ಲಿ ಜರ್ಮನಿಯ ಕತ್ರಿನ್ ಮುಲ್ಲರ್ ನಂತರ ಎರಡನೇ ಸ್ಥಾನ ಗಿಟ್ಟಿಸಿಕೊಂಡರು. ಸಿಮ್ರಾನ್ ಅವರು ಸೆಮಿ ಫೈನಲ್ ನಲ್ಲಿ ಒಟ್ಟಾರೆ 3ನೇ ಶ್ರೇಯಾಂಕ ಪಡೆದರು.

ಸಿಮ್ರಾನ್ ಅವರು ದೃಷ್ಟಿದೋಷದೊಂದಿಗೆ ಅವಧಿಪೂರ್ವ ಜನಿಸಿದ್ದರು.

ಗುರುವಾರ ರಾತ್ರಿ 4 ಓಟಗಾರ್ತಿಯರ ನಡುವೆ ನಡೆಯಲಿರುವ ಫೈನಲ್ ನಲ್ಲಿ ಸಿಮ್ರಾನ್ ಸ್ಪರ್ಧಿಸಲಿದ್ದಾರೆ.

ಸಿಮ್ರಾನ್ ಬುಧವಾರ ನಡೆದ ತನ್ನ ಹೀಟ್ಸ್ ನಲ್ಲಿ ವರ್ಷದ ಶ್ರೇಷ್ಠ ಪ್ರದರ್ಶನ(12.17 ಸೆಕೆಂಡ್)ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News