ಡೇವಿಸ್ ಕಪ್‌ಗೆ ರೋಹನ್ ಬೋಪಣ್ಣ ವಿದಾಯ

Update: 2023-09-17 12:43 GMT

Photo: twitter//@namitkumar_17

ಲಕ್ನೊ : ಮೊರಾಕ್ಕೋ ವಿರುದ್ಧ ರವಿವಾರ ವರ್ಲ್ಡ್ ಗ್ರೂಪ್-2 ಪಂದ್ಯದಲ್ಲಿ ಯೂಕಿ ಭಾಂಬ್ರಿ ಜೊತೆಗೂಡಿ ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಹಿರಿಯ ಟೆನಿಸ್ ತಾರೆ ರೋಹನ್ ಬೋಪಣ್ಣ ಡೇವಿಸ್ ಕಪ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

43ರ ಹರೆಯದ ಬೋಪಣ್ಣ ಅವರು 33ನೇ ಹಾಗೂ ಕೊನೆಯ ಡೇವಿಸ್ ಕಪ್ ಪಂದ್ಯವನ್ನಾಡಿದರು. ಭಾಂಬ್ರಿ ಅವರೊಂದಿಗೆ ಡಬಲ್ಸ್ ಪಂದ್ಯವನ್ನಾಡಿದ ಬೋಪಣ್ಣ ಅವರು ಒಂದು ಗಂಟೆ ಹಾಗೂ 11 ನಿಮಿಷಗಳ ಹೋರಾಟದಲ್ಲಿ ಎಲಿಯೊಟ್ ಬೆನ್‌ಚೆಟ್ರಿಟ್ ಹಾಗೂ ಯೂನಿಸ್ ಲಲಾನಿ ಲಾರೌಸ್ಸಿ ಅವರನ್ನು 6-2, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಭಾವುಕರಾದ ಬೋಪಣ್ಣ ಅವರು ತನ್ನ ಭಾರತದ ಶರ್ಟ್ ಅನ್ನು ಕಳಚಿ ಡೇವಿಡ್ ಕಪ್ ವೃತ್ತಿಜೀವನಕ್ಕೆ ತೆರೆ ಎಳೆದರು. ಬೋಪಣ್ಣ ಅವರು 33 ಡೇವಿಸ್ ಪಂದ್ಯಗಳನ್ನಾಡಿದ್ದು 13 ಡಬಲ್ಸ್ ಸಹಿತ ಒಟ್ಟು 23 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.

ಬೋಪಣ್ಣ ಅವರ ಕುಟುಂಬದವರು ಹಾಗೂ ಸ್ನೇಹಿತರು ಬೋಪಣ್ಣ ಅವರ ಕೊನೆಯ ಪಂದ್ಯವನ್ನು ವೀಕ್ಷಿಸಲು ಲಕ್ನೊಗೆ ಆಗಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News