ಎರಡನೇ ಟೆಸ್ಟ್ ಗೆ ಮಳೆ ಅಡ್ಡಿ: ಪಂದ್ಯ ಡ್ರಾ ಮಾಡಿಕೊಳ್ಳಲು ವೆಸ್ಟ್ಇಂಡೀಸ್ ಕಸರತ್ತು

Update: 2023-07-23 02:53 GMT

Photo: Times Of India


ಹೊಸದಿಲ್ಲಿ: ತೀವ್ರ ರಕ್ಷಣಾತ್ಮಕ ಆಟಕ್ಕೆ ಅಂಟಿಕೊಂಡ ವೆಸ್ಟ್ಇಂಡೀಸ್ ಬ್ಯಾಟ್ಸ್ ಮನ್ಗಳ ವಿಕೆಟ್ ಕಬಳಿಸಲು ಭಾರತ ತಂಡದ ಬೌಲರ್ಗಳು ಸಂಘಟಿತ ಪ್ರಯತ್ನ ನಡೆಸಿದರೂ, ಮಳೆಯಿಂದ ಬಾಧಿತವಾದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಅತಿಥೇಯ ತಂಡ ಹರಸಾಹಸ ನಡೆಸಿದೆ.

ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಅಂತ್ಯದ ವೇಳೆಗೆ ವೆಸ್ಟ್ಇಂಡೀಸ್ 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ. ಪದೇ ಪದೇ ಮಳೆ ಅಡ್ಡಿಪಡಿಸಿದ್ದರಿಂದ ಕೇವಲ 67 ಓವರ್ ಆಟ ಮಾತ್ರ ಸಾಧ್ಯವಾಗಿದ್ದು, ವೆಸ್ಟ್ಇಂಡೀಸ್ ಕೇವಲ 143 ರನ್ ಗಳಿಸಿತು. ಇದು ಪಂದ್ಯ ಡ್ರಾ ಮಾಡಿಕೊಳ್ಳುವ ಅತಿಥೇಯ ತಂಡದ ಉದ್ದೇಶವನ್ನು ಸ್ಪಷ್ಟಪಡಿಸಿದೆ.

ಭಾರತ ಮೊದಲ ಇನಿಂಗ್ಸ್ ನ ಲ್ಲಿ ಗಳಿಸಿದ್ದ 438 ರನ್ಗಳನ್ನು ಬೆನ್ನಟ್ಟಿದ ವೆಸ್ಟ್ಇಂಡೀಸ್ ಇನ್ನೂ 209 ರನ್ ಗಳ ಹಿನ್ನಡೆಯಲ್ಲಿದ್ದು, ಶನಿವಾರ ಮುಹಮ್ಮದ್ ಸಿರಾಜ್, ಆರ್.ಅಶ್ವಿನ್, ಮುಕೇಶ್ ಕುಮಾರ್ ಹಾಗೂ ರವೀಂರ್ಧರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

ವಿಂಡೀಸ್ ಬ್ಯಾಟ್ಸ್ ಮ ನ್ಗಳ ಋಣಾತ್ಮಕ ಬ್ಯಾಟಿಂಗ್ ತಂತ್ರದ ಹೊರತಾಗಿಯೂ ಭಾರತೀಯ ಬೌಲರ್ಗಳು ಆಗಾಗ್ಗೆ ಮಿಂಚಿದರು. ವೆಸ್ಟ್ಇಂಡೀಸ್ ತಂಡದ ನಾಯಕ ಕ್ರೆಗ್ ಬ್ರೆಥ್ ವೈಟ್ (235 ಎಸೆತಗಳಲ್ಲಿ 75) ಅದ್ಭುತ ಪ್ರದರ್ಶನ ನೀಡಿ, ಭಾರತೀಯ ದಾಳಿಯನ್ನು ಹತಾಶಗೊಳಿಸುವ ಪ್ರಯತ್ನ ಮಾಡಿದರು. ಕೊನೆಗೂ ಮ್ಯಾಜಿಕ್ ಎಸೆತದ ಮೂಲಕ ಅವರ ವಿಕೆಟ್ ಕಬಳಿಸುವಲ್ಲಿ ವಿಶ್ವದ ನಂಬರ್ ವನ್ ಬೌಲರ್ ಯಶಸ್ವಿಯಾದಾಗ ಭಾರತ ಪಾಳಯದಲ್ಲಿ ಸಂತಸ ಮೂಡಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News