ಶಾಟ್‌ಪುಟ್: ಪದಕ ಗೆಲ್ಲಲು ಅಮಿಶಾ ವಿಫಲ
Update: 2024-09-04 14:29 GMT
ಪ್ಯಾರಿಸ್: ಭಾರತೀಯ ಪ್ಯಾರಾ ಅತ್ಲೀಟ್ ಅಮಿಶಾ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಎಫ್46 ಶಾಟ್‌ಪುಟ್ ಫೈನಲ್‌ನಲ್ಲಿ ಪದಕ ಗೆಲ್ಲುವುದರಿಂದ ವಂಚಿತರಾದರು. ಬುಧವಾರ ನಡೆದ ಪದಕ ಪಂದ್ಯದಲ್ಲಿ 9.25 ಮೀ.ದೂರಕ್ಕೆ ಡಿಸ್ಕಸ್ ಎಸೆದು ಜೀವನಶ್ರೇಷ್ಠ ಪ್ರದರ್ಶನ ನೀಡಿರುವ ಅಮಿಶಾ 14ನೇ ಸ್ಥಾನ ಪಡೆದರು. ಅಮಿಶಾ ಅವರ ಮೊದಲ ಪ್ರಯತ್ನವೇ ಶ್ರೇಷ್ಠ ಥ್ರೋ ಆಗಿತ್ತು.
ಅಮೆರಿಕದ ನೊಯೆಲ್ ಮಲ್ಕಾಮಕಿ ನೂತನ ವಿಶ್ವದಾಖಲೆ(14.06ಮೀ.)ಯೊಂದಿಗೆ ಚಿನ್ನ ಜಯಿಸಿದರೆ, ಮುರಿಯಾ(12.35 ಮೀ.)ಹಾಗೂ ಹೊಲಿ ರಾಬಿನ್ಸನ್(11.88ಮೀ.)ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರು.
ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಭಾರತದ ಪರಮ್‌ಜೀತ್ ಕುಮಾರ್ ಪದಕ ಗೆಲ್ಲುವಲ್ಲಿ ವಿಫಲರಾದರು. 150 ಕೆಜಿ ಎತ್ತುವ ಮೂಲಕ ಕುಮಾರ್ 8ನೇ ಸ್ಥಾನ ಪಡೆದರು.